ಪ್ರಜಾಸ್ತ್ರ ಸುದ್ದಿ
ಇಂಡಿಯನ್ ಕ್ರಿಕೆಟ್ ಟೀಂನ ಸ್ಟಾರ್ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಇವರಿಗೆ ಇರುವ ಕ್ರೇಜ್ ಬೇರೆನೇ ಇದೆ. ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತಹ ವಿರಾಟ್ ಕೊಹ್ಲಿ ಹಾಗೂ ಆಸೀಸ್ ನ 19 ವರ್ಷದ ಯುವ ಆಟಗಾರ ಸ್ಯಾಮ್ ಕೊನೆ ಸ್ಟಸ್ ನಡುವೆ ಸಣ್ಣದೊಂದು ಕಿರಿಕ್ ಆಗಿದೆ. ಪಾದಾರ್ಪಣೆ ಪಂದ್ಯದಲ್ಲಿಯೇ ಸ್ಯಾಮ್ ಕಿರಿಕ್ ಮಾಡಿಕೊಂಡಿದ್ದು, ಇದಕ್ಕೆ ಅಲ್ಲಿನ ಮಾಧ್ಯಮಗಳನ್ನು ವಿರಾಟ್ ಕೊಹ್ಲಿಯನ್ನು ಕೀಳು ಮಟ್ಟದಲ್ಲಿ ಬಿಂಬಿಸುತ್ತಿವೆ.
ದಿ ವೆಸ್ಟ್ ಆಸ್ಟ್ರೇಲಿಯನ್ ಪತ್ರಿಕೆ ಭಾನುವಾರದ ಸಂಚಿಕೆಯಲ್ಲಿ ಸ್ಯಾಮ್ ಫೋಟೋ ದೊಡ್ಡದಾಗಿ ಹಾಕಿ VIRAT I AM YOUR FATHER(ವಿರಾಟ್ ನಾನು ನಿನ್ನ ತಂದೆ) ಎಂದು ಬರೆದಿದೆ. ಪತ್ರಿಕೆಯ ಕ್ರೀಡಾ ಪುಟದ ಸಂಪಾದಕ ಜಾಕಬ್ ಅದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೊನ್ನೆಯಷ್ಟೇ ಕೋಡಂಗಿಗೆ ಕೊಹ್ಲಿಯನ್ನು ಇದೇ ಪತ್ರಿಕೆ ಹೋಲಿಸಿತ್ತು. ವಿರಾಟ್ ಕೊಹ್ಲಿಗೆ ಈಗಾಗ್ಲೇ ಆಟದ ನಿಯಮದಂತೆ ದಂಡ ಹಾಗೂ ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ. ಹೀಗಿದ್ದರೂ ಅಲ್ಲಿನ ಮಾಧ್ಯಮಗಳು ಅತ್ಯಂತ ಕೀಳು ಮಟ್ಟಕ್ಕೆ ಇಳಿದಿವೆ. ಇದಕ್ಕೆ ಕೊಹ್ಲಿ ಅಭಿಮಾನಿಗಳು ಸಹ ಎಕ್ಸ್ ನಲ್ಲಿ ತಿರುಗೇಟು ನೀಡುತ್ತಿದ್ದಾರೆ.