ಪ್ರಜಾಸ್ತ್ರ ವಿಶೇಷ
2025ನೇ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಲೇಖಕಿ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಸ್ತಿ ಅವರನ್ನು ಭೇಟಿಯಾದ ಅನುಭವವನ್ನು ಯುಕೆ ನಿವಾಸಿ ವಿಜಯಪುರದ ದೇವರ ಹಿಪ್ಪರಗಿಯ ಕೊಂಡಗೂಳಿ ಮೂಲದ ಬಸವ ಪಾಟೀಲರು ಆಡುಮಾತಿನ ಹಂಚಿಕೊಂಡಿದ್ದಾರೆ.
ನಿನ್ನೆಯಿಂದ ಪ್ರಶಸ್ತಿ ಘೋಷಣೆ ಆಗಿ, ಬಾನು ಮುಷ್ತಾಕ್ ಅವರ “ಎದೆಯ ಹಣತೆ”ಯ ಪುಸ್ತಕದ, ಇಂಗ್ಲಿಷ್ ಅನುವಾದದ “ಹಾರ್ಟ್ ಲ್ಯಾಂಪ” ಪುಸತ್ತಕಕ್ಕ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ 2025, ಕನ್ನಡದಲ್ಲಿ ಜನ್ಮತಾಳಿದ 12 ಕಥೆಗಳು, ಕಥೆಗಳಲ್ಲ, ಬದುಕುಗಳು! ಆ ಬದುಕಿನಲ್ಲಿ, ಸಮಗೊಳಿಸುವ ಆಶಯ ಬಂಡಾಯ, ಬಂಡಾಯ ಬಯಲಾಗಿಸುವ ತತ್ವ! ಅಂತಹ ಮೂಲ ಆಶಯಗಳನ್ನ, ಅದರಲ್ಲಿ ಹುದುಗಿರುವ ಮಾನವತ್ವವನ್ನ, ಜಗತ್ತಿಗೆ ಪರಿಚಯಸಿದ ಮತ್ತೊಬ್ಬ ಕನ್ನಡತಿ, “ದೀಪಾ ಭಸ್ತಿ”, ಮೂಲ ಲೇಖಕರನ್ನ ಮತ್ತು ಅನುವಾದಕರನ್ನ ಸನ್ಮಾನಿಸುವ ಕಾರ್ಯಕ್ರಮ ಜಗತ್ತಿನಾದ್ಯಾಂತ ಖುಷಿಯ ಅಲೆಗಳು ಪಸರಿಸಿದವು, ವಿಶೇಷವಾಗಿ ಮಹಿಳೆಯರು ಉಪಸ್ಥಿತಿ.
ಇಂತಹ ಕಾರ್ಯಕ್ರಮದ, ದಿನಾಂಕ ಮತ್ತು ಸ್ಥಳ ಸುದ್ದಿ ತಿಳಿಲಾರದೆ ತೋಳಲಾಡಿದ್ಯಾ, ಅದೆ ಖುಷಿಯೊಳಗ, ಉತ್ಸಾಹದಾಗ, ಒಂದಿಷ್ಟು ಪೊಸ್ಟಗಳನ್ನ ಮಾಡಿದ್ಯಾ, ಒಂದಿಷ್ಟು ಅಂತರಾಷ್ಟ್ರೀಯ ಸಂಸ್ಥೆಗಳ ವರದಿ ಹಂಚಿಕೊಂಡಿದ್ಯಾ, ಹಾಗೆ ಕೆಲವೊಂದು ನಿರೀಕ್ಷಿತ ಅಪವಾದಗಳು ಕಂಡುಕೊಂಡಿದ್ಯಾ, ಇಂತಹ ಮಾನಸಿಕ ಸ್ಥಿತಿಯಲ್ಲಿ, ಇವತ್ತಿನ ಕಾಯಕ ಮುಗಿಸಿ, ಸುಮ್ಮನೆ ಫೇಸಬುಕ್ ತೆಗೆದರೆ, ಬಾನು ಮುಷ್ತಾಕ್ ಅವರ ಮುಖಪುಟದಲ್ಲಿ, ಒಂದು ಸುದ್ದಿ ಇತ್ತು, ಇವತ್ತ ಇಂತಹ ಸಮಯದಲ್ಲಿ, ಇಂತಹ ಸ್ಥಳದಲ್ಲಿ ಇರತೀನಿ, ಬನ್ನಿ ಭೇಟಿಯಾಗೊಣ, ಅಂತ!
ನೋಡಿದ್ದೆ ತಡ, ನಾ ಇರೂವ ಜಾಗದಿಂದ ಎಟ್ಟ ದೂರ ಅಂತ ಗೂಗಲ್ ಮ್ಯಾಪ ಹಾಕಿ ನೋಡದೆ “ಮೂವತ್ತ ನಿಮೀಷ” ಹೊಗ್ಗೊ ಮುಂಜಾಳಿ ಹೋಲಿ, ಏನ ಮಾಡೂದು ಈಗ ಹ್ಯಾಂಗ ತಯ್ಯಾರಿ, ಅವರಿಗಿ ಏನ ಕೊಡಬೇಕು? ಅನ್ನುದರೊಳಗ, ಪಟಕನೆ ಹೊಳಿದಿದ್ದೆ, ನಾ ಬರೆದ ಕವನ “ಕಣಕಿ” ಹಂಗೆ ಅದನ್ನ ಪ್ರಿಂಟ್ ಮಾಡಿ ಕಿಸ್ಯಾದಾಗ ಇಟಕೊಂಡು, ಸಂಗಾತಿಗಿ ಫೋನ್ ಮಾಡಿ ಕಿಂಗ ಕಿಂಗ ಮನಿಗಿ ಬರದು ತಟಕ ತಡಾನೆ ಆಗತಾದ ಅಂದೆ, ಆಯಿತು ಸರಿ ಅಂದರು. ಅನ್ನುದೆ ತಡ “ಟ್ಯೂಬ್”ಗೆ ಇಳಿದ ಬಿಟ್ಯಾ, ಟ್ರೇನ್ ಬಂತು, ಅದಾರಗ ಕುಂದಾರನ “ತಲಿ ಓಡಲಕ್ಕತ್ತು, ಹೂವಿನ ಪುಟ್ಟಿ ತಗೋಳಲೆ? ಮನಸ್ಸ ಬ್ಯಾಡ, ಪಾಪ ಅವರ ಅದನ್ನ ಹ್ಯಾಂಗ ತಗೋಂಡು ಹೋತಾರ? ಮತ್ತೇನ, ಕೊಡಲಿ? ಅನ್ನು ತಲಿ ಇನ್ನ ನಿಂತಿರಲಿಲ್ಲ, ಅಟ್ಟರೋಳಗ ಸೇರಬೇಕಾದ ಜಾಗ ಬಂದೆ ಬಿಟ್ಟತು. ಈ ಜಾಗ ನಾ ಮೊದಲ ಬಂದಿರಲಿಲ್ಲ, ಅನಾಹೂತ ಜಾಗ, ಕಲೆ, ಸಂಸ್ಕೃತಿ, ಸಾಹಿತ್ಯ, ಮತ್ತ ಹಂಗೆ ದೊಡ್ಡ ದೊಡ್ಡ ಅಂಗಡಿ ಮಳಿಗೆಗಳು. ಹಿಂಗ ನೋಡಕೋತು ಹೋಗದರೋಳಗ ಸೇರ ಬೇಕಾದ ಜಾಗ ಬಂತು, ನೋಡತೀನಿ “ಪುಸ್ತಕದ ಭಂಡಾರ” ಯಾವುದು ನೋಡಲಿ, ಯಾವುದ ಬಿಡಲಿ, ಯಾವುದು ಖರೀಧಿ ಮಾಡಲಿ? ಇಡತಕ ಓಡಿದ ತಲಿ ತುಂಬಾ, ಈಗ ಪ್ರಶ್ನೆಗಳು ಓಡಲಕ್ಕತ್ತವು. ಅದರೊಳಗ ಸ್ಥಿತಪ್ರಜ್ಞೆ ಕೆಲಸ ಮಾಡತು. ಮನಸ್ಸಿಗಿ ಹೇಳತು, ಕೂಸ ನೀ ಎದಕ್ಕ ಬಂದಿ? ಬಾನು ಮುಷ್ಯಾಕ್ ಮತ್ತು ದೀಪಾ ಭಸ್ತಿಯವರಿಗಿ ಭೆಟ್ಟಿಯಾಗಲಕ್ಕ ಬಂದಿ. ಈಗ ಅವರ ಪುಸ್ತಕ ನೋಡ ಮೊದಲ ಅಂತ ಕ್ಯಾಕರಿಸಿ ಉಗಿತು. ಹಂಗೆ ತಟಕ ಇಲ್ಲಿ ಇರ ಸಿಬ್ಬಂದಿಗಳ ಜೋತಿ ಮಾತಾಡಿ, ಬರಹಗಾರರು ಎಲ್ಲಿ ಅದಾರ ತಿಳ್ಕೋರಾ ಹುಚ್ಚಬಾರಗಿ, ಅನ್ನನಾ, ಅನುಸಂಧಾನದ ಮನ, ನಿಂದರ ತಟಕ ಎಡ್ಡ ಪೆನ್ನ ತಗೋತೀನಿ ಅದನ್ನ ಬಿಲ್ಲ ಮಾಡಸು ನ್ಯಾವದಾಗ, ಸಿಬ್ಬಂದಿ ಬಲ್ಲಿ ಮಾಹಿತಿ ತೇಗಿತಿನಿ, ಹ್ಯಾಂಗದ ಪಿಲಾನು? ಸ್ಥಿತಪ್ರಜ್ಞೆ, ಅಲಾ ಬೆರಕಿ ಕಂಗಾ ಮಾಡು, ಅಂತ ಬಿಲ್ಲ ಕಟ್ಟತಾ, ಇವತ್ತ ಪ್ರಶಸ್ತಿ ಗೆದ್ದರಾಲ್ಲ ಅವರ ನಾಡಿನಂವ ಅಂತ ಮುಗಳ್ನೆಗೆ ಬಿರಿದ್ಯಾ, ಆ ನಗುವಿಗಿ ಪ್ರತಿಸ್ಪಂದಿಸಿ, “I see, loads people are coming here to see her” ಅನ್ನುದ ತಡ ಒಳಗೋಳಗ “ಕನ್ನಡ ಅಸ್ಮಿತೆ” ಕುಣಿಲಕ್ಕತ್ತಿತ್ತ!
ನನ್ನ ಹಾವ ಭಾವ ಗಮನಿಸಿದ ಸಿಬ್ಬಂದಿ, ಕಾರ್ಯಕ್ರಮ ಎಳಕ್ಕ ಚಾಲೂ ಆಗ್ಯಾದ, ನೀ ತಡ ಮಾಡಿ ಬಂದಿ, ಈಗ ನಿನಗ ಟಿಕೇಟು ಸಿಗಲ್ಲ, ಅದಕ್ಕ ನೀ ಇಲ್ಲೆ ತಿರಗಾಡತಿರು ಎಂಟರತನ, ಆ ಕಾರ್ಯಕ್ರಮ ಮುಗ್ಯಾನ ನಿನಗ ನಮ್ಮ ಸಹಉದ್ಯೋಗಿಗಳಿಗೆ ಹೇಳತೀನಿ, ಅವರು ಬಿಡಲಕ್ಕ ತೊಂದರೆ ಇಲ್ಲ ಆದರೂ ಅವರಿಗಿ ಒಂದ ಮಾತ ಕೇಳು, ಬಿಡತಾರ ಅನ್ನು ಭರವಸೆ ಮೂಡಿಸಿದರು, ಒಳ್ಳೇದಾಗಲಿ ನಿಮಗ ಅಂತ ಮತ್ತ ತ್ವಾಡ್ಯಾ ಪುಸ್ತಕ ನೋಡದ್ಯಾ, ಅಟ್ಟಾಗನ ತಡ, ಮತ್ಯೊಂದು ಐಡಿಯಾ ಬಂತು, ಈಗ ಅವರಿಗೆನು ಕೊಡಬೇಕು? ಆಗ ಒಂದು “ಅಭಿನಂದಿಸುವ ಕಾರ್ಡ್” ತಗೊಂಡ್ಯಾ, ಅದರೊಳಗ ಬರದ್ಯಾ, ನಿಮಗೆ ಶರಣು. ಬಂಡಾಯದ ತತ್ವವನ್ನ ಬಯಲಾಗಿಸಿದ್ದಕ್ಕ (ಇದು ಭಾಳ ದೊಡ್ಡ ಚರ್ಚೆ, ಅದಕ್ಕ ಬ್ಯಾರೆನೆ ಬರಿತೀನಿ) ಇಟ್ಟ ಚಾದ ಅಂಗಡ್ಯಾಗ ಬರಿತಿದ್ಯಾ, ಅವರು ಬಂದ ಮಾಡವರಿದ್ದರು, ನಾ ಬರಿದು ನೋಡಿ ಇನ್ನೊಂದ ತಟಕ ಟೈಮ ತಗೋ ಅಂತ ಕೈ ಸನ್ನಿ ಮುಂದಕ ನಡೆದರು, ಕಾರ್ಡ್, ನಾ ಬರೆದ ಕವನ, ಎದೆಯ ಹಣತೆಯ ಎರಡ ಕಾಪಿ ಬ್ಯಾಗ್ ಇಟಕೊಂಡು, ನಿಂತ್ಯಾ ಅಲ್ಲೆ ಇಬ್ಬರು ದೆಹಲಿಯವರು ಸಿಕ್ಕರು ಅವರು ಪುಸ್ತಕ ಪ್ರಕಟ ಮಾಡವರಂತ, ಪರಿಚಯ ಮಾಡಕೊಂಡರು, ಆಗ ಅವರು “ಬಾನು ಮುಷ್ತಾಕ್” ಅವರ ಬಗ್ಗೆ ಕೇಳಿದರು, ನನಗ ಗೊತ್ತಿದ್ದ ವಿಷಯ, ಬಸವಲಿಂಗಯ್ಯನವರು “ಬುಸಾ ಸಾಹಿತ್ಯ” ವ್ಯಾಖ್ಯಾನಿಸಿದ್ದು, ಬಂಡಾಯ ಸಾಹಿತ್ಯದ ಹುಟ್ಟು, ಮತ್ತು ಬಾನು ಮುಷ್ತಾಕ್ ಅವರ ಪಾತ್ರ ಸಂಕ್ಷಿಪ್ತವಾಗಿ ವಿವರಿಸಿದೆ. ಅವರು ಖುಷಿ ಪಟ್ಟು, ಅವರ ಪುಸ್ತಕದ ನಾಲ್ಕೈದು ಪುಟ ಓದಿ ಅದರಲ್ಲಿರುವ ಕನ್ನಡ ಪದಗಳ ಬಗ್ಗೆ ಕುತೂಹಲದಿಂದ ಕೇಳಿದರು, “ಗಂಡ, ಗಂಡಾಂತರ” ಇವರೆಡನ್ನ ಸಂಕ್ಷಿಪ್ತವಾಗಿ ವಿವರಿಸಿದೆ. ಆಗ ಆ ಕಾರ್ಯಕ್ರಮದ ವ್ಯವಸ್ಥಾಪಕರು ನೀವು ಒಳಗೆ ಹೋಗಬಹುದು ಪಾಳೆ ಹಚ್ಚರಿ ಅಂತ, ಪಾಳೆ ನೋಡತೀನಿ ಸುಮಾರು ನೂರು ನೂರೈವತ್ತು ಜನ! ಇಬ್ಬರು ಕನ್ನಡತಿಯರು, ತಮ್ಮ ಪುಸ್ತಕಕ್ಕ ಸಹಿಮಾಡಿ ಕೊಡತಾ ಇದಾರೆ. ಓದುಗರಿಗೆ, ಪಕ್ಕದಲ್ಲಿ ನಿಂತ ಆಸ್ಟೇಲಿಯಾ, ಅಮೇರಿಕಾ, ಚೈನಾ, ಮೀಡಲ್ ಈಸ್ಟ್ ದೇಶದ ನಾಗರಿಕರೆ ಅದರಲ್ಲಿ 99 ಪ್ರತಿಶತ ಮಹಿಳೆಯರು (ಯುವತಿಯರು ಮತ್ತು ಮಧ್ಯವಯಸ್ಕದವರು) ನಾನು ಸಾಲಿನಲ್ಲಿ ನಿಂತು ಭಾವಪೂರಿತವಾಗಿ ಮಾತನಾಡುವದನ್ನ ಕೇಳಿದ ಅಮೇರಿಕಾದ ಯುವ ಬರಹಗಾರ್ತಿ, ಇಂತಹ ಆಳ ಇದಿಯಾ ಅಂತಹ ಕುತೂಹಲದಿಂದ ಕೇಳತಾ ಇದ್ದಳು!
ಹಂಗೆ ಪಾಳೆ ಹತ್ತಿರ ಬಂತು, ಆಗ ಲೇಖಕಿಯರು, ಓದುಗರೊಂದಿಗೆ ಮಾತಾಡುವುದು ಕಿವಿಗೆ ಬಿಳತಾ ಇತ್ತು, ಅದರಲ್ಲಿ ಒಂದು ನುಡಿ ಕೇಳ್ಸತು, ಬಹುಷ ಬಾನು ಮುಷ್ತಾಕ್ ಅವರು ಕನ್ನಡದಲ್ಲಿನ ಹಾರೈಕೆಗಳನ್ನ ಬರದಾರ ಅಂತ ಅನ್ನಸ್ತು, ಒಂದು “ಒಳ್ಳೆದಾಗಲಿ” ಅದನ್ನ ಇಂಗ್ಲಿಷನಲ್ಲಿ ಓದುಗರಿಗೆ ಹೇಳಿದರು”, ಇಟ್ಟಾ ಆಗೂದೋರಳಗ ನನ್ನ ಪಾಳೆ ಬಂದೆ ಬಿಟ್ಟತು, “ಶರಣು, ನಾನು ಬಸವ ವಿಜಯಪುರ ಜಿಲ್ಲೆಯವನು” ಅಂದಿದ್ದೆ ತಡ ಬಾನು ಮುಷ್ತಾಕ್ ಅವರ ಖುಷಿ ಭಾವ ಮನಮುಟ್ಟಿತು. ಆಗ ಅವರ ಪಕ್ಕದಲ್ಲಿ ನಿಂತಿದ್ದವರು (ಬಹುಷ ಅವರ ಮಗಳು) “ಇನ್ನೇನ್ ನಿಮಗ ಟ್ರಾನ್ಷಲೇಷನ್ ಬೇಕಾಗಿಲ್ಲ” ಅಂತ ನಕ್ಕರು. ಆಗು ನಾನು “ಬಂಡಾಯ ಸಾಹಿತ್ಯವನ್ನ ಜಗತ್ತಿಗೆ ಪರಿಚಯಸಿದರಿ, ಶರಣು! ಎನ್ನುತ್ತ ಕೈ ಮುಗಿಯುತ್ತ, ಅವರಿಗೆ ಬರೆದೆ “thank you” ಪತ್ರವನ್ನ ಅವರಿಗೆ ಕೊಟ್ಟು, ನಾನು ಬರೆದ ಕವನ “ಕಣಕಿ” ಪ್ರಿಂಟೌಟನ್ನ ನಿಮಗೆ ಬಿಡುವಿದ್ದಾಗ ಓದಿ, ಕೊನೆಗೆ ನನ್ನ ಈ ಮೇಲ್ ಐಡಿ ಇದೆ. ಅದಕ್ಕ ಸಾಧ್ಯವಾದರ ಪ್ರತ್ಯುತ್ತರ ಬರಿರಿ ಅಂದ್ಯಾ, ಅಷ್ಟರೊಳಗ ಬಾನು ಮುಷ್ತಾಕ್ ಅವರು, “ಬಸವ ಅವರಿಗೆ, ಗೌರವಾದರಗಳಿಂದ” ಅಂತ ತಮ್ಮ ಸಹಿಮಾಡಿದರು!
ಇಟ್ಟ ಮಾತಾಡಿ, ದೀಪಾ ಭಸ್ತಿ ಅವರ ಹತ್ತಿರ ಬಂದ್ಯಾ, ಅಟ್ಟರೊಳಗ ಅವರೆ ಕನ್ನಡದಾಗ ಮಾತಾಡಲಕ್ಕತ್ತರು, “ಬಸವ ಅವರೆ ಕೇಳದೆ ನಿಮ್ಮ ಮಾತು” ಅಂದರು, ನಾ ಅದಕ್ಕ “ಬಂಡಾಯ ಸಾಹಿತ್ಯ ಜಗತ್ತಿಗಿ ಪರಿಚಯಸಿದ್ದಕ್ಕ, ಶರಣು” ಅಂದೆ ಅವರ ಮುಗಳನಕ್ಕರು, ಹಂಗೆ ಸಹಿ ಮಾಡಿದರು, ಅವರಿಗೆ ಬೋರಮಾಳ ಬಗ್ಗೆ ಕಾಂಪ್ಲಿಮೆಂಟ್ ಮಾಡಬೇಕಂದ್ಯಾ, ಮರೆತೆ ಹೋಯಿತು, ಹಂಗೆ ಅವರ ಜೇನಿನ ಹೊಳೆಯೊ.. ಬಗ್ಗೆ ಹೇಳಬೇಕಿತ್ತು, ಆದರೆ ಭಾಳಷ್ಟು ಜನ ಪಾಳೆಯಲ್ಲಿ ನಿಂತಿದ್ದರು, ಸಂವೇದನೆಯಿಂದ ಹೊರಬಂದು ಒಂದೆರಡು ಪೋಟೊ ತೆಕ್ಕೊಂಡು ಮನಿಗಿ ಬಂದ್ಯಾ,.
ಬರುವಾಗ ಟ್ರೇನನಲ್ಲಿ ಮನೆಯೆ ವಾಟ್ಸಾಪ್ ಗ್ರೂಪಿಗೆ ಫೋಟೊ ಕಳಸಿದ ಕೊಡಲೆ ಅಣ್ಣ ಚಪ್ಪಾಳೆ ತಟ್ಟಿದ, ಅವನೆ ಹೇಳಿದ ಮಾತು ನೆನಪಾಯಿತು, “ವಚನ ಸಾಹಿತ್ಯ ಅನುಭಾವ ಸಾಹಿತ್ಯ, ಅದಕ್ಕ ಅದು ಸಮಕಾಲಿನ ಅನ್ನಸ್ತಾದ, ಇವತ್ತ ನನಗನ್ನಿಸಿದ್ದು, ಬಂಡಾಯ ಸಾಹಿತ್ಯ, ಅನುಭಾವ ಮತ್ತು ಪ್ರತಿರೋಧದ ಸಾಹಿತ್ಯ. ಅದಕ್ಕ ಅದು ಸಮಕಾಲೀನ ಜೊತೆಗೆ ಸಂವೇದನೆಯನ್ನ ಕಲಸ್ತಾದ”. ಇಂತಹದೊಂದು ಕನ್ನಡ ಸಾಹಿತ್ಯದಲ್ಲಿ ಘಟಿಸಿದ್ದಕ್ಕ ಅದಕ್ಕ ಕೊಂಡಗೂಳಿಯಂವ ವಿಜಯಪೂರದಂವ ಕನ್ನಡದಂವನಾಗಿ ಸಮಕ್ಷಮ ಆಗಿದ್ದಕ್ಕ, ಖುಷಿ ಆಯಿತು. ಶರಣು ಶರಣಾರ್ಥಿ. – ಬಸವ ಕೊಂಡಗೂಳಿಯಂವ