ಪ್ರಜಾಸ್ತ್ರ ಸುದ್ದಿ
ಹೈದರಾಬಾದ್(Hyderabad): ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಕಾರಿಗೆ ಕಾರ್ಯಕರ್ತನೊಬ್ಬ ಸಿಲುಕಿ ಭೀಕರವಾಗಿ ಸಾವನ್ನಪ್ಪಿರುವ ವಿಡಿಯೋ ವೈರಲ್ ಆಗಿದೆ. ಸತ್ತೇನಪಲ್ಲಿ ಕ್ಷೇತ್ರದ ರೆಂಟಪಲ್ಲಕ್ಕೆ ಭೇಟಿ ನೀಡಿದ್ದ ವೇಳೆ ಈ ದುರಂತವೊಂದು ನಡೆದಿದೆ. ಸಿಂಗಯ್ಯ ಅನ್ನೋ ವ್ಯಕ್ತಿ ಮೃತಪಟ್ಟಿದ್ದಾನೆ. ಈ ವೇಳೆ ಕಾರ್ಯಕರ್ತರು ಕಾರಿನ ಮೇಲೆ ಏರಿ ಕುಣಿಯುತ್ತಾರೆ. ಜಗನ್ ಕೈ ಮುಗಿಯುತ್ತಿರುವ ದೃಶ್ಯ ಸಹ ಇದೆ.
ವೈಎಸ್ಆರ್ ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿಯನ್ನು ಸ್ವಾಗತಿಸುವ ವೇಳೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಜೈಕಾರು ಹಾಕುವುವುದು ಕಾಣಿಸುತ್ತೆ. ಅವರ ಕಾರಿನ ಮೇಲೆಯೇ ಏರಿ ಜೈಕಾರ ಹಾಕುತ್ತಾರೆ ಅಂದರೆ ಪೊಲೀಸ್ ವ್ಯವಸ್ಥೆ ಏನಾಗಿತ್ತು, ಮಾಜಿ ಸಿಎಂ ಕಾರಿನ ಸುತ್ತಮುತ್ತ ಇಷ್ಟೊಂದು ಪ್ರಮಾಣದಲ್ಲಿ ಜನರನ್ನು ಬಿಟ್ಟು ಓರ್ವನ ಭೀಕರ ಸಾವು ಆಗುವಂತೆ ಆಯ್ತು ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.