ಪ್ರಜಾಸ್ತ್ರ ಸುದ್ದಿ
ಮಂಡ್ಯ(Mandya): ಜಿಲ್ಲೆಯ ನೆಲಮಂಗಲ ತಾಲೂಕಿನರುವ ಆದಿಚುಂಚನಗಿರಿ ಮಠದಲ್ಲಿ ನಿರ್ಮಾಣಗೊಂಡಿರುವ ಕಾಲಭೈರವ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಮುಂಜಾನೆ ಲೋಕಾರ್ಪಣೆಗೊಳಿಸಿದರು. ದೇವರ ದರ್ಶನ ಪಡೆದ ಬಳಿಕ ಮಾತನಾಡಿದ ಪ್ರಧಾನಿ, ಕರ್ನಾಟಕ ತಂತ್ರಜ್ಞಾನ ಹಾಗೂ ತತ್ವಜ್ಞಾನ ಎರಡನ್ನೂ ಸಮೃದ್ಧವಾಗಿ ಹೊಂದಿದೆ. ಕಾಲಭೈರವನ ದರ್ಶನ ಪಡೆದಿದ್ದು ನನ್ನ ಪುಣ್ಯ ಎಂದರು.
ಸಮಾಜಕ್ಕೆ ಮಠಗಳ ಕೊಡುಗೆ ಅಪಾರ. ಸಾಮಾನ್ಯ ಜನರ ಜೀವನದ ಬಗ್ಗೆ ಬಾಲಗಂಗಾಧರನಾಥ ಸ್ವಾಮೀಗಳಿಗೆ ಅರಿವಿತ್ತು. ಅವರು ಕರುಣೆಯ ಪ್ರತಿರೂಪವಾಗಿದ್ದರು ಅಂತಾ ಹೇಳಿದರು. ಇದೆ ಸೌಂದರ್ಯ ಲಹರಿ ಅನ್ನೋ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ನವಿಲಿನ ಆಕೃತಿಯನ್ನು ಪ್ರಧಾನಿಗೆ ಉಡುಗರೆಯಾಗಿ ನೀಡಿದರು. 80 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದೆ.




