ಮೊದಲು ಮಗು.. ಆಮೇಲೆ ಮದುವೆಯಾದ ಪಾಂಡ್ಯ ಬಾಳಲ್ಲಿ ಬಿರುಗಾಳಿ!

157

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಡಿಯನ್ ಕ್ರಿಕೆಟ್ ಟೀಂನ ಉಪ ನಾಯಕ ಹಾರ್ದಿಕ್ ಪಾಂಡ್ಯ ಕರಿಯರ್ ನಲ್ಲಿ ಸಧ್ಯಕ್ಕೆ ಸಾಕಷ್ಟು ಇಳಿತಗಳು ಕಾಣಿಸಿಕೊಳ್ಳುತ್ತಿವೆ. ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ತಂಡ ಬಿಟ್ಟು ಮುಂಬೈಗೆ ಬಂದು ನಾಯಕನ ಸಿಕ್ಕರೂ ಸಕ್ಸಸ್ ಸಿಗಲಿಲ್ಲ. ಈಗ ವೈವಾಹಿಕ ಜೀವನದಲ್ಲೂ ಸಮಸ್ಯೆ ಎದ್ದಿದೆ ಎಂದು ಹೇಳಲಾಗುತ್ತಿದೆ.

ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನಿತಾಶಾ ಸ್ಟಾನ್ಕೊವಿಕ್ ನಡುವೆ ಬಿರುಕು ಮೂಡಿದೆ. ಡಿವೋರ್ಸ್ ಹಂತಕ್ಕೆ ಬಂದಿದೆ ಎನ್ನುವ ಚರ್ಚೆ ಜೋರಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ನತಾಶಾ ಮತ್ತೊಬ್ಬರ ಜೊತೆಗೆ ಕಾಣಿಸಿಕೊಂಡಿದ್ದಾರೆ. ಪಾಪರಾಜಿಗಳ ಕಣ್ಣಿಗೆ ಬಿದ್ದ ನತಾಶಾಗೆ ಡಿವೋರ್ಸ್ ಬಗ್ಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸದೆ ಹೋಗಿದ್ದಾರೆ.

ಒಂದು ವೇಳೆ ಹಾರ್ದಿಕ್ ಹಾಗೂ ನಿತಾಶಾ ವಿಚ್ಛೇದನೆ ಪಡೆದರೆ ಆಸ್ತಿಯಲ್ಲಿ ಶೇಕಡ 70ರಷ್ಟು ಕೊಡಬೇಕಾಗುತ್ತೆ ಎನ್ನಲಾಗುತ್ತಿದೆ. ಆದರೆ, ಆಸ್ತಿಯೆಲ್ಲ ತಾಯಿ ಹೆಸರಲ್ಲಿದೆ. ಹಾರ್ದಿಕ್ ಪಾಂಡ್ಯ ಹೆಸರಲ್ಲಿ ಇಲ್ಲವೆಂದು ಸಹ ಮಾತುಗಳು ಕೇಳಿ ಬಂದಿವೆ. ಆದರೆ, ಡಿವೋರ್ಸ್ ವಿಚಾರದ ಬಗ್ಗೆ ಇಬ್ಬರಿಂದ ಯಾವುದೇ ಮಾತುಗಳು ಕೇಳಿ ಬಂದಿಲ್ಲವಾದರೂ ವೈಮನಸ್ಸಿನ ಹೊಗೆ ಆಡುತ್ತಿರುವುದು ಸತ್ಯ.

ಮಗುವಾದ ಬಳಿಕ ಮದುವೆಯಾದ ಹಾರ್ದಿಕ್

ಡ್ಯಾನ್ಸರ್, ನಟಿಯಾಗಿರುವ ನಿತಾಶಾ ಸ್ವಾನ್ಕೊವಿಕ್ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಸ್ನೇಹವಿತ್ತು. ಅದು ಎಲ್ಲವನ್ನೂ ದಾಟಿ ಹೋದ ಪರಿಣಾಮ 2020 ಜುಲೈ 30ರಂದು ಗುಂಡು ಮಗು ಜನಿಸಿದೆ. ಮಗನಿಗೆ ಅಗಸ್ತ್ಯ ಎಂದು ಹೆಸರಿಟ್ಟಿದ್ದಾರೆ. ಮುಂದೆ ಈ ಜೋಡಿ ಫೆಬ್ರವರಿ 14, 2023ರಲ್ಲಿ ರಾಜಸ್ಥಾನದ ಜೈಪುರದಲ್ಲಿ ಮದುವೆಯಾಗಿದೆ.

ಪಾಂಡ್ಯಕ್ಕಿಂತ ಪತ್ನಿ 3 ವರ್ಷ ದೊಡ್ಡವಳು

ಪಾಂಡ್ಯ ಪತ್ನಿ ನಿತಾಶಾ ಸೆರಿಬಿಯಾ ದೇಶದ ಮೂಲದವಳು. ಆದರೆ, ಮಾಡಲ್ ಆಗಿ ಮುಂಬೈನಲ್ಲಿ ನೆಲೆಸಿದಳು. ಮುಂದೆ 2014ರಲ್ಲಿ ಸತ್ಯಾಗ್ರಹ ಚಿತ್ರದ ಮೂಲಕ ಬಾಲಿವುಡ್ ಅಂಗಳದಲ್ಲಿ ನಟಿಯಾಗಿ ಕಾಣಿಸಿಕೊಂಡಳು. ಹಲವಾರು ಸಿನಿಮಾಗಳನ್ನು ಮಾಡಿದಳು. ಬಿಗ್ ಬಾಸ್ ಸೀಸನ್ 8ರಲ್ಲಿ ಕಾಣಿಸಿಕೊಂಡಳು. ಡ್ಯಾನ್ಸ್ ಶೋಗಳಲ್ಲಿಯೂ ಭಾಗವಹಿಸಿದಳು.

2020ರಲ್ಲಿ ಕ್ರಿಕೆಟಿಗರ ಹಾರ್ದಿಕ್ ಪಾಂಡ್ಯ ಜೊತೆಗೆ ಎಂಗೇಜ್ ಆದಳು. ಮುಂದೆ ಮಗುವಾಯಿತು. 2023ರಲ್ಲಿ ಮದುವೆಯಾದರು. ನಿತಾಶಾಗೆ ಈ 33 ವರ್ಷ. ಹಾರ್ದಿಕ್ ಗೆ 30 ವರ್ಷ.




error: Content is protected !!