ಪ್ರಜಾಸ್ತ್ರ ಸುದ್ದಿ
ಲಹ್ಲಿ(Lahli): ರೋಹ್ಟಕ್ ನಲ್ಲಿರುವ ಚೌಧರಿ ಬನ್ಸಿ ಲಾಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹರಿಯಾಣ ಹಾಗೂ ಕೇರಳ ನಡುವಿನ ರಣಜಿ ಪಂದ್ಯದಲ್ಲಿ(Ranji Trophy) ಹರಿಯಾಣದ ವೇಗಿ ಅನ್ಶುಲ್ ಕಾಂಬೋಜ್ ಎಲ್ಲ 10 ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. 23 ವರ್ಷದ ಬೌಲರ್ ಅನ್ಶುಲ್ ಕೇವಲ 49 ರನ್ ನೀಡಿ, 9 ಮಿಡನ್ ಓವರ್ ಹಾಕಿ 10 ವಿಕೆಟ್ ಕಬಳಿಸಿದ್ದಾರೆ. ಹೀಗೆ 10 ವಿಕೆಟ್ ಪಡೆದ ಮೂವರಲ್ಲಿ 2ನೇ ಸ್ಥಾನ ಪಡೆದಿದ್ದಾರೆ.
1956ರಲ್ಲಿ ಅಸ್ಸಾಂ ವಿರುದ್ಧ ಬಂಗಾಳದ ಬೌಲರ್ ಪ್ರೇಮಾಂಗ್ಯು ಚಟರ್ಜಿ 20 ರನ್ ಗಳಿಗೆ 10 ವಿಕೆಟ್ ಪಡೆದಿದ್ದಾರೆ. 1985ರಲ್ಲಿ ವಿದರ್ಭ ವಿರುದ್ಧ ರಾಜಸ್ಥಾನದ ಪ್ರದೀಪ ಸುಂದರಂ 78ಕ್ಕೆ 10 ವಿಕೆಟ್ ಪಡೆದಿದ್ದಾರೆ. 2024ರಲ್ಲಿ ಅನ್ಶುಲ್(Anshul Kamboj) 49ಕ್ಕೆ 10 ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ. ಆತಿಥೇಯ ತಂಡದ ಸಿ ಗುಂಪಿನಲ್ಲಿ ಹರಿಯಾಣ ಆಟವಾಡುತ್ತಿದೆ. 291 ರನ್ ಗಳಿಗೆ ಕೇರಳ ಆಲೌಟ್ ಆಗಿದೆ. 88 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿರುವ ಹರಿಯಾಣ ಒತ್ತಡದಲ್ಲಿದೆ.