ಪ್ರಜಾಸ್ತ್ರ ಸುದ್ದಿ
ಜೆರುಸಲೆಂ(Hezbollah): ಭಾನುವಾರ ಮುಂಜಾನೆ ಇಸ್ರೇಲ್ ನ ಐಎಎಫ್ ಫೈಟರ್ ಜೆಟ್ ಗಳ ಮೂಲಕ ಲೆಬನಾನ್(lebanon) ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಸಾವಿರಾರು ಲಾಂಚರ್ ಗಳನ್ನು ನಾಶಗೊಳಿಸಲಾಗಿದೆ ಎಂದು ಇಸ್ರೆಲ್ ಮಿಲಿಟರಿ ತಿಳಿಸಿದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾದ(Hezbollah) ಸಾವಿರಾರು ರಾಕೆಟ್ ಲಾಂಚರ್ ಗಳನ್ನು ನಾಶಗೊಳಿಸಲಾಗಿದೆ.
ನಮ್ಮ ಮೇಲೆ ಯಾರೇ ದಾಳಿ ಮಾಡಿದರೂ ನಾವು ಪ್ರತಿ ದಾಳಿ ಮಾಡುತ್ತೇವೆ. ದೇಶದ ಜನರ ರಕ್ಷಣೆ ವಿಚಾರದಲ್ಲಿ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲು ನಾವು ಸಿದ್ಧವೆಂದು ಇಸ್ರೆಲ್(israel) ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಈ ಘಟನೆಯಿಂದ ಇಸ್ರೆಲ್ ನಲ್ಲಿ 48 ಗಂಟೆಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.