Ad imageAd image

ರಷ್ಯಾದಲ್ಲಿ ಬಿಯರ್ ಬಾಟಲ್ ಮೇಲೆ ಮಹಾತ್ಮ ಗಾಂಧಿ ಚಿತ್ರ

Nagesh Talawar
ರಷ್ಯಾದಲ್ಲಿ ಬಿಯರ್ ಬಾಟಲ್ ಮೇಲೆ ಮಹಾತ್ಮ ಗಾಂಧಿ ಚಿತ್ರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ರಷ್ಯಾದಲ್ಲಿ ತಯಾರಿಸುತ್ತಿರುವ ಬಿಯರ್ ಕಂಪನಿಯೊಂದು ತನ್ನ ಬಿಯರ್ ಬಾಟಲ್ ಗಳ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಭಾವಚಿತ್ರ ಬಳಿಸಿದೆ. ಅಲ್ಲದೆ, ಅದಕ್ಕೆ ಮಹಾತ್ಮ ಜಿ ಎಂದು ಹೆಸರಿಟ್ಟಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ತಮ್ಮ ಹೋರಾಟಮಯ ಜೀವನದುದ್ದಕ್ಕೂ ಧೂಮಪಾನ, ಮದ್ಯಪಾನ ವಿರೋಧಿಸಿರುವ ಗಾಂಧೀಜಿಗೆ ಮಾಡುತ್ತಿರುವ ಅಪಮಾನ. ಈ ಬಗ್ಗೆ ರಷ್ಯಾ ಅಧ್ಯಕ್ಷರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಲಾಗುತ್ತಿದೆ.

ಎಕ್ಸ್ ಖಾತೆಯಲ್ಲಿ ಹಲವರು ಬಿಯರ್ ಬಾಟಲ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಗಾಂಧಿ ಅವರ ತತ್ವ, ಸಿದ್ಧಾಂತ, ಆದರ್ಶಗಳಿಗೆ ವಿರುದ್ಧವಾಗಿ ಇಲ್ಲಿ ನಡೆದುಕೊಳ್ಳಲಾಗಿದೆ. ಜೊತೆಗೆ ಭಾರತೀಯರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಲಾಗಿದೆ. ಪ್ರಧಾನಿ ಹಾಗೂ ವಿದೇಶಾಂಗ ಸಚಿವರು ಮಧ್ಯಪ್ರವೇಶಿಸಿ ಇದಕ್ಕೆ ಕಡಿವಾಣ ಹಾಕಬೇಕು ಎಂದಿದ್ದಾರೆ. ರಷ್ಯಾದ ಬ್ರುವರಿ ರಿವರ್ಟ್ ಎನ್ನುವ ಕಂಪನಿ ತಯಾರಿಸುವ ತನ್ನ ಬಿಯರ್ ಬಾಟಲ್ ಗಳ ಮೇಲೆ ಮಹಾತ್ಮ ಜಿ ಎಂದು ಬರೆದು ಅವರ ಫೋಟೋವನ್ನು ಬಳಸಿದೆ. ಈ ಹಿಂದೆ ಇಸ್ರೇಲ್, ಅಮೆರಿಕ ಕಂಪನಿಗಳು ಈ ರೀತಿಯ ದುಸ್ಸಾಹಸಕ್ಕೆ ಕೈ ಹಾಕಿದ್ದವು. ತೀವ್ರ ವಿರೋಧ, ಎಚ್ಚರಿಕೆ ಬಳಿಕ ತೆಗೆದು ಹಾಕಲಾಯಿತು.

WhatsApp Group Join Now
Telegram Group Join Now
Share This Article