ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಈಗಾಗ್ಲೇ ಹಲವಾರು ಮೈಲುಗಲ್ಲು ಸಾಧಿಸಿರುವ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಾದ, ನಮ್ಮ ಬೆಂಗಳೂರಿನಲ್ಲಿರುವ ಇಸ್ರೋದ(ISRO) ಬಹುದೊಡ್ಡ ಕನಸಿನ ಯೋಜನೆಯಾದ ಗಗನಯಾನ ಉಡಾವಣೆಗೆ ಸಜ್ಜಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ. ಬೆಂಗಳೂರು ಸ್ಪೇಸ್ ಎಕ್ಸ್ ಪೋ-2024 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದ್ದಾರೆ. ಈ ವರ್ಷಾಂತ್ಯಕ್ಕೆ ಗಗನಯಾನ ಉಡಾವಣೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಇನ್ನು ಚಂದ್ರಯಾನ-4ಗೂ(Chandrayan) ಕೇಂದ್ರ ಸರ್ಕಾರ ಅನುಮೋದನೆಯನ್ನು ಘೋಷಿಸಿದೆ. ಇದರ ಬಗ್ಗೆ ಕೆಲವು ತಿಂಗಳಲ್ಲಿಯೇ ಸ್ಪಷ್ಟ ಚಿತ್ರಣ ಸಿಗಲಿದೆ. ಇನ್ನು ಅನೇಕ ಅಂಗೀಕಾರಗಳು ಆಗಬೇಕಿವೆ. ಚಂದ್ರಯಾನ-3 ಯಶಸ್ವಿಯಾಗಿದೆ ಉಡಾವಣೆಯಾಗಿ ಲ್ಯಾಂಡ್ ಆಗಿದೆ. ಅದು ವಾಪಸ್ ಬರುವುದು ಸಹ ಮತ್ತೊಂದು ಕಾರ್ಯಾಚರಣೆಗೆ ಸಮವಾಗಿದೆ. 2035ರ ವೇಳೆಗೆ ಭಾರತ ತನ್ನದೆಯಾದ ಬಾಹ್ಯಾಕಾಶ ಕೇಂದ್ರ ಸ್ಥಾಪಿಸಲಿದೆ. 2040ರ ವೇಳೆಗೆ ಗಗನಯಾತ್ರಿಗಳನ್ನು ಕಳಿಸುವ ಯೋಜನೆ ನಡೆಯಲಿದೆ ಎಂದು ತಿಳಿಸಿದ್ದಾರೆ.