ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯ ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್, ಕೇಂದ್ರ ಸಚಿವ, ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿಯನ್ನು ಕರಿಯ ಎಂದಿರುವುದು ಸಾಕಷ್ಟು ವೈರಲ್ ಆಗಿದೆ. ಜೆಡಿಎಸ್, ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಹೆಚ್ಡಿಕೆ, ಕಳ್ಳ, ಕರಿಯ ಎನ್ನುವುದಕ್ಕೆ ಜಮೀರ್ ರೀತಿಯ ವಾತಾವರಣದಿಂದ ಬಂದಿಲ್ಲ. ನಾನು ಕುಳ್ಳ ಅಂತ ಯಾವತ್ತೂ ಕರೆದಿಲ್ಲ. ಈ ಹಿಂದೆ ಜೊತೆಯಾಗಿದ್ದು ರಾಜಕೀಯದಿಂದ ಮಾತ್ರ ಎಂದು ಕಿಡಿ ಕಾರಿದ್ದಾರೆ.
ಇದನ್ನು ಸಹ ಸಿಎಂ, ಡಿಸಿಎಂ, ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನು ನಾಗರಿಕ ಸರ್ಕಾರ ಎನ್ನಬೇಕಾ? ಸಿಎಂ ಗರ್ವಭಂಗ ಮಾಡ್ತೀನಿ, ಸೊಕ್ಕು ಮುರಿತೀನಿ ಅನ್ನೋದು ಅಸಂವಿಧಾನಿಕ ಪದನಾ ಎಂದು ಪ್ರಶ್ನಿಸಿದರು. ಇನ್ನು 50 ಕೋಟಿ ರೂಪಾಯಿ ಆರೋಪದ ಬಗ್ಗೆ ಎಸ್ಐಟಿ ರಚನೆ ಮಾಡಲಿ. ದೇಶದಲ್ಲಿಯೇ ಅತಿ ಹೆಚ್ಚು ಎಸ್ಐಟಿ ರಚನೆ ಮಾಡಿದ ಕೀರ್ತಿ ಸಿದ್ದರಾಮಯ್ಯನವರದು ಎಂದು ಕಾಲೆಳೆದರು.