ಪ್ರಜಾಸ್ತ್ರ ಸುದ್ದಿ
ರಾಯಚೂರು(Raichur): ಸಚಿವ ಸಂಪುಟ ವಿಸ್ತರಣೆಯಾಗುತ್ತೋ, ಪುನರ್ ರಚನೆ ಆಗುತ್ತೋ ಗೊತ್ತಿಲ್ಲ. ಇದು ಹೈಕಮಾಂಡ್ ಗೆ ಬಿಟ್ಟ ವಿಚಾರ. ನಮ್ಮ ಸ್ಥಾನ ಉಳಿಸಿಕೊಳ್ಳುವುದೇ ಸಾಕಾಗಿದೆ. ದೆಹಲಿಗೆ ಹೋದಾಗಲೂ ನನ್ನ ಇಲಾಖೆಗೆ ಸಂಬಂಧಿಸಿದ ವಿಚಾರದ ಬಗ್ಗೆ ಮಾತ್ರ ಮಾತನಾಡುತ್ತೇನೆ. ಇನ್ನು ನಮ್ಮಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮೂವರು ಸಿಎಂ ಬದಲಾದವರು ಎಂದು ಹೇಳಿದರು.
ಸಚಿವ ಸಂಪುಟ ಬದಲಾವಣೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದು, ಪಕ್ಷದಲ್ಲಿ ಐದು ಬಾರಿ ಗೆದ್ದ ಹಿರಿಯರಿದ್ದಾರೆ. ವರಿಷ್ಠರ ಮೇಲೆ ಒತ್ತಡವಿದೆ. ನಮಗೂ ಅವಕಾಶ ಕೊಡಿ ಎನ್ನುತ್ತಿದ್ದು, ಸಚಿವ ಸಂಪುಟ ಬದಲಾವಣೆ ಆದರೂ ಆಗಬಹುದು ಎಂದು ಸೋಮವಾರ ಹೇಳಿದ್ದಾರೆ.