ಖ್ಯಾತ ಗಾಯಕ ಲಕ್ಷ್ಮಿರಾಮ್ ಗೆ ಕಾಯಕ ರತ್ನ ಪ್ರಶಸ್ತಿಯ ಗರಿ

266

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಮೈಸೂರು: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಪ್ರತಿವರ್ಷ ವಿವಿಧ ಕ್ಷೇತ್ರದ ಸಾಧಕರಿಗೆ ನೀಡುವ ರಾಜ್ಯ ಮಟ್ಟದ ಕಾಯಾಕರತ್ನ ಪ್ರಶಸ್ತಿಗೆ ಮೈಸೂರಿನ ಲಕ್ಷ್ಮಿರಾಮ್ ಆಯ್ಕೆ ಆಗಿದ್ದಾರೆ ಎಂದು ಮೈಸೂರು ಜಿಲ್ಲಾ ಅಧ್ಯಕ್ಷರಾದ ಡಾ.ಎಸ್ ಮಂಗಳ ಮೂರ್ತಿ ತಿಳಿಸಿದ್ದಾರೆ.

ಜುಲೈ 13, ಶನಿವಾರ ಬೀದರನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಜಿಲ್ಲಾ ಘಟಕವು ಆಹ್ವಾನಿಸಿದೆ. ಈ ವೇಳೆ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ, ಉಪಾಧ್ಯಕ್ಷ ಕುಮಾರಸ್ವಾಮಿ ಮತ್ತು ಕವಿಗಳಾದ ಡಿ.ಪುಟ್ಟಸ್ವಾಮಿ, ಡಾ ಮಧು ಅವರಿದ್ದರು.

ಲಕ್ಷ್ಮಿರಾಮ್  ಕಳೆದ 2 ದಶಕಗಳಿಂದ ಸಾಂಸ್ಕೃತಿಕ ಸೇವೆ ಸಲ್ಲಿಸುತ್ತಿದ್ದಾರೆ. ಸೃಜನಶೀಲ ಗಾಯನ, ಸಂಘಟನಾ ಚತುರತೆ, ಅಂಬೇಡ್ಕರ್, ಬಸವಣ್ಣ, ಬುದ್ಧ ಅವರ ತತ್ವಕ್ಕೆ ಬದ್ಧತೆಯಿಂದ ನಡೆದು ಕೊಳ್ಳುವಲ್ಲಿಯು ಆದರ್ಶರಾಗಿದ್ದಾರೆ. 300ಕ್ಕೂ ಹೆಚ್ಚಿನ ಬುದ್ಧ ಗೀತೆಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. 3000ಕ್ಕೂ ಹೆಚ್ಚು ಕಾಲೇಜು ವಿಧ್ಯಾರ್ಥಿಗಳಿಗೆ ಕಂಸಾಳೆ, ಜಾನಪದ ಗೀತೆ, ಭಾವಗೀತೆ, ದೇಶ ಭಕ್ತಿಗೀತೆ ಕಲಿಸಿದ್ದಾರೆ. 25ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನೀಡಿದ್ದಾರೆ. ಇವರ ಸಾಧನೆಗೆ ಮೈಸೂರು ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ. ಕರುನಾಡ ರತ್ನ, ಕರುನಾಡ ಸಂಗೀತ ರತ್ನ, ಕರುನಾಡ ಭೂಷಣ, ಕನ್ನಡ ಸೇವ ರತ್ನ, ಕನ್ನಡ ವಿಕಾಸ ರತ್ನ ಸೇರಿದಂತೆ ಇನ್ನೂ ಹಲವಾರು ಪ್ರಶಸ್ತಿಗಳು ಸಂದಿವೆ.




error: Content is protected !!