ಪ್ರಜಾಸ್ತ್ರ ಸುದ್ದಿ
ಪುಣೆ(Pune): ಈ ದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದಾಗಲಿ ಎನ್ನುವಂತಿಲ್ಲ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಕರ್ನಾಟಕ ನ್ಯಾಯಾಧೀಶರ ಪ್ರಕರಣವೊಂದರಲ್ಲಿ ಹೇಳಿದೆ. ಹೀಗಿದ್ದರೂ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಕೇರಳವನ್ನು ಮಿನಿ ಪಾಕಿಸ್ತಾನ ಎಂದಿದ್ದಾರೆ. ಪುಣೆ ಜಿಲ್ಲೆಯ ಪುರಂದರ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇರಳ ಮಿನಿ ಪಾಲಿಸ್ತಾನವಾಗಿದೆ. ಹೀಗಾಗಿ ಅಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯನ್ನು ಗೆಲ್ಲಿಸಲಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಣೆ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ, ಕೇರಳ ಭಾರತದ ಭಾಗವಾಗಿದೆ ಎಂದಿದ್ದಾರೆ. ಮುಂದುವರೆದ ಲವ್ ಜಿಹಾದ್, ಮತಾಂತರಗಳನ್ನು ವಿಷಯಗಳನ್ನು ಉಲ್ಲೇಖಿಸಿ ತಮ್ಮ ಹೇಳಿಕೆ ವಾಸ್ತವವಾಗಿದೆ ಎಂದಿದ್ದಾರೆ. ಈ ಕುರಿತು ಕಾಂಗ್ರೆಸ್ ವಕ್ತಾರ ಅತುಲ್ ಲೋಂದೆ ಪಾಟೀಲ ಕಿಡಿ ಕಾರಿದ್ದು, ಸಿಎಂ ಫಡ್ನವೀಸ್ ಸಚಿವ ಸಂಪುಟದ ಭಾಗವಾಗಲು ಏನು ಅಗತ್ಯವಿದೆ ಎಂದಿದ್ದಾರೆ.