ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆ ಬುಧವಾರ ಮುಗಿದಿದೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಗುರುವಾರ ಮಾತನಾಡಿದ್ದರು, ನಾನು ಎಲ್ಲ ಚುನಾವಣೆಗಳಲ್ಲಿ 80 ರಿಂದ 90 ಸಾವಿರ ಮತಗಳನ್ನು ಪಡೆಯುತ್ತಿದ್ದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ 1 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆಯಬೇಕು. ನನ್ನ ರಾಜಕೀಯ ಬದುಕು ಒಂದು ರೀತಿಯಲ್ಲಿ ಐಪಿಎಲ್ ಮ್ಯಾಚ್ ರೀತಿಯಾಗಿದೆ. ಕಾಂಗ್ರೆಸ್ ಸೇರುವ ಅನಿವಾರ್ಯ ಸ್ಥಿತಿಯನ್ನು ಕುಮಾರಸ್ವಾಮಿ ನಿರ್ಮಾಣ ಮಾಡಿದ್ದಾರೆ. ಹಾಗಾಂತ ನಾನು ಹತಾಶೆಗೊಂಡಿಲ್ಲ ಎಂದರು.
ದೇವೇಗೌಡರು ಒಂದು ದೈತ್ಯ ಶಕ್ತಿ. ಅವರನ್ನು, ಕುಮಾರಸ್ವಾಮಿಯನ್ನು ಬೈದರೆ ಸಹಿಸದ ಸಮುದಾಯವಿದೆ. ಅವರನ್ನು ಮಾತ್ರ ಸಮುದಾಯದ ನಾಯಕರೆಂದು ಗುರುತಿಸುತ್ತಾರೆ. ನಮ್ಮನ್ನು ಯಾವಾಗ ಸಮುದಾಯದ ಲೀಡರ್ ಎಂದುಕೊಳ್ಳುತ್ತಾರೋ ಗೊತ್ತಿಲ್ಲ. ಒಕ್ಕಲಿಗರ ಬೆಂಬಲ ಇರುವ ವಂಶದ ಕುಡಿ ವಿರುದ್ಧ ಸ್ಪರ್ಧಿಸಿದ್ದೇನೆ. ಕಾನ್ಫಿಡೆನ್ಸ್ ಕಳೆದುಕೊಂಡಿಲ್ಲ ಅಂತಾ ಹೇಳಿದರು.