ಪ್ರಜಾಸ್ತ್ರ ಸುದ್ದಿ
ಮಲಗ(Malaga): ಸ್ಪೇನ್ ನ ಟೆನ್ನಿಸ್ ದಿಗ್ಗಜ ರಫೆಲ್ ನಡಾಲ್(Rafael Nadal) ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಈ ಮೊದಲೇ ಹೇಳಿದಂತೆ ಡೇವಿಸ್ ಕಪ್ ನಲ್ಲಿ ಕೊನೆಯ ಬಾರಿಗೆ ದೇಶವನ್ನು ಪ್ರತಿನಿಧಿಸಿದ ನಡಾಲ್, ನೆದರ್ಲೆಂಡ್ ನ ಬೋಟಿಕ್ ಬ್ಯಾನ್ ಡೇ ವಿರುದ್ಧ 6-4, 6-4 ಅಂತರದಿಂದ ಸೋಲುವ ಮೂಲಕ ಭಾವನಾತ್ಮಕವಾಗಿ ಟೆನ್ನಿಸ್ ಆಟಕ್ಕೆ ನಿವೃತ್ತಿ ಹೇಳಿದರು.
ಕಳೆದ 23 ವರ್ಷಗಳಿಂದ ಟೆನ್ನಿಸ್(Tennis Player) ಅಂಗಳದಲ್ಲಿ ತಮ್ಮ ಪಾರಮ್ಯ ಮೆರೆಯುತ್ತ ಬಂದಿದ್ದಾರೆ. ಬರೋಬ್ಬರಿ 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. 14 ಫ್ರೆಂಚ್ ಓಪನ್ ಸಿಂಗ್ ಪ್ರಶಸ್ತಿ ಜಯಿಸಿದ್ದಾರೆ. ಕಿಂಗ್ ಆಫ್ ಕ್ಲೇ ಎಂದು ಖ್ಯಾತಿ ಗಳಿಸಿರುವ 38 ವರ್ಷದ ನಡಾಲ್ ನಿವೃತ್ತಿ ಹೇಳಿದರು. ಇವರ ಮುಂದಿನ ಜೀವನಕ್ಕೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಹರಿದು ಬಂದಿವೆ.