ಕರೋನಾ ಲಸಿಕೆ: ಸಿಎಂಗಳೊಂದಿಗೆ ಪಿಎಂ ಸಭೆ

305

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕರೋನಾ ಲಸಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಸಭೆ ನಡೆಸಲಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ವಿಡಿಯೋ ಕಾನ್ಫ್ ರೆನ್ಸ್ ಮೂಲಕ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಲು ಪ್ರಧಾನಿ ಮೋದಿ ಮುಂದಾಗಿದ್ದಾರೆ.

ಕರೋನಾ ಲಸಿಕೆ ನೀಡಲು ಭಾರತದಲ್ಲಿ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ದೇಶದ ತುಂಬಾ ಕರೋನಾ ವ್ಯಾಕ್ಸಿನ್ ಡ್ರೈ ರನ್ ನಡೆಯುತ್ತಿದೆ. ಲಸಿಕೆಯನ್ನ ದೇಶದಲ್ಲಿ ಜಾರಿಗೆ ತರುವ ಮೊದ್ಲು ಎಲ್ಲ ಮುಖ್ಯಮಂತ್ರಿಗಳ ಜೊತೆ ಜನವರಿ 11ರ ಸಂಜೆ 4 ಗಂಟೆಗೆ ಪ್ರಧಾನಿ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗ್ತಿದೆ.




error: Content is protected !!