ಪ್ರಜಾಸ್ತ್ರ ಸುದ್ದಿ
ಜಮ್ಮು ಮತ್ತು ಕಾಶ್ಮೀರ(Jammu and Kashmir): ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯನ್ನು ಪ್ರಧಾನಿ ಮೋದಿ ಶುಕ್ರವಾರ ಉದ್ಘಾಟಿಸಿದ್ದಾರೆ. ನದಿ ಮಟ್ಟದಿಂದ 359 ಮೀಟರ್ ಎತ್ತರವಿದೆ. 1,315 ಮೀಟರ್ ಉದ್ದವಿದೆ. ಜಗತ್ ಪ್ರಸಿದ್ಧ ಐಫೆಲ್ ಟವರ್ ಗಿಂತ 35 ಮೀಟರ್ ಎತ್ತರವಿದೆ. ರಿಯಾಸಿ ಜಿಲ್ಲೆಯಲ್ಲಿರುವ ಚೆನಾಬ್ ನದಿ ಮೇಲೆ ಈ ರೈಲ್ವೆ ಸೇತುವೆ ನಿರ್ಮಿಸಲಾಗಿದೆ.
ಇದರ ಜೊತೆಯಲ್ಲೇ ಅಂಜಿ ನದಿಯ ಮೇಲೆ ನಿರ್ಮಿಸಲಾದ ದೇಶದ ಮೊದಲ ಕೇಬಲ್ ಸ್ಟೇ ರೈಲ್ವೆ ಸೇತುವೆಯನ್ನು ಉದ್ಘಾಟಿಸಿದರು. ಈ ವೇಳೆ ರೈಲ್ವೆ ಸಚಿವ ಅಶ್ವಿನಿವೈಷ್ಣವ್, ಜಮ್ಮು ಕಾಶ್ಮೀರ್ ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹಾ ಹಾಗೂ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಉಪಸ್ಥಿತರಿದ್ದರು.