ಪ್ರಜಾಸ್ತ್ರ ಸುದ್ದಿ
ಶ್ರೀಹರಿಕೋಟಾ(Sriharikota): ಇಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ಪ್ರೋಬಾ-3 ಯೋಜನೆಯ ಎರಡು ನೌಕೆಗಳನ್ನು ಹೊತ್ತು ಇಸ್ರೋದ(ISRO) ಪಿಎಸ್ಎಲ್ ವಿ ರಾಕೆಟ್ ನಭಕ್ಕೆ ಹಾರಿತು. ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಈ ಕಾರ್ಯಾಚರಣೆಯ ಭಾಗವಾಗಿದೆ. ಈ ಬಗ್ಗೆ ಇಸ್ರೋ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಪಿಎಸ್ಎಲ್ ವಿಸಿ-59(PSLV C-59) ರಾಕೆಟ್ ಯಶಸ್ವಿಯಾಗಿ ಹಾರಿದೆ.
ಇದರ ಉದ್ದೇಶ ಕೃತಕ ಸೂರ್ಯಗ್ರಹಣ ಸೃಷಿಸಿ ಸೂರ್ಯನ ಕರೋನಾ ಅಧ್ಯಯನ ನಡೆಸಲು ವಿಜ್ಞಾನಿಗಳಿಗೆ ಒಳ್ಳೆಯ ಅವಕಾಶವಾಗಿದೆ. ಸೂರ್ಯನ ಹೊರಗಿನ ವಾತಾವರಣ ಹಾಗೂ ಬಾಹ್ಯಾಕಾಶ ನೌಕೆಗಳ ನಿಖರ ಚಲನೆ ಬಗ್ಗೆ ತಿಳಿಯುವುದು ಪ್ರಮುಖ ಉದ್ದೇಶವಾಗಿದೆ.