‘ಮೇಲ್ಛಾವಣಿ ಪೂರ್ಣಗೊಳ್ಳದ ಕಾಮಗಾರಿಯಿಂದ ರಾಮ ಮಂದಿರ ಸೋರಿಕೆ’

88

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಅಯೋಧ್ಯೆಯಲ್ಲಿ ನಿರ್ಮಾಣ ಮಾಡಿರುವ ರಾಮ ಮಂದಿರ ಕಾಮಗಾರಿ ಅಪೂರ್ಣಗೊಂಡಿದ್ದು, ಹೀಗಾಗಿ ಸೋರುತಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಗುರುವಾರ ನಗರದಲ್ಲಿ ಮಾತನಾಡಿದ ಅವರು, ಮಂದಿರದ ಮೇಲ್ಛಾವಣಿ ಕಾಮಗಾರಿ ಪೂರ್ತಿಯಾಗಿಲ್ಲ. ಇದರಿಂದಾಗಿ ಸೋರುತ್ತಿದೆ ಹೊರತು ಕಾಮಗಾರಿಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಈ ಕುರಿತು ಗೊಂದಲ ಸೃಷ್ಟಿಸುತ್ತಿದ್ದಾರೆ.

ಇನ್ನು ಅಯೋಧ್ಯೆಯಲ್ಲಿ ಬಿಜೆಪಿ ಸೋಲಾಗಲು ಕಾರಣ ಅಲ್ಲಿನ ಜನರಿಗೆ ಆಮಿಷ ಒಡ್ಡಿದ್ದಾರೆ. ಆಸೆ, ಆಮಿಷಕ್ಕೆ ಒಳಗಾದವರಿಂದ ಸೋಲಾಗಿದೆ. ಇದನ್ನು ಹಿಂದೂ ಧಾರ್ಮಿಕ ನಂಬಿಕೆಗೆ ಬಿದ್ದ ಹೊಡೆತ ಅಂತಾ ಹೇಳಬಾರದು ಎಂದರು.




error: Content is protected !!