ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಇಂಡಿಯನ್ ಪ್ರಿಮಿಯರ್(IPL) ಲೀಗ್ ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕೆಲವೇ ಕೆಲವು ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಒಂದು. ಇದುವರೆಗೂ ಒಮ್ಮೆಯೂ ಕಪ್ ಗೆಲ್ಲದಿದ್ದರೂ ಆರ್ ಸಿಬಿ(RCB) ಫ್ಯಾನ್ಸ್ ಕಮ್ಮಿಗಲ್ಲ. ಕ್ರೇಜ್ ಜಾಸ್ತಿಯಾಗುತ್ತಾ ಹೋಗುತ್ತಿದೆ. ಇದೆಲ್ಲದರ ನಡುವೆ ಆರ್ ಸಿಬಿ ತಂಡ ತನ್ನ ಆಟಗಾರರು ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಹಂಚಿಕೊಂಡಿದೆ.
"ಕಲಿಯೋಕೆ ಕೋಟಿ ಭಾಷೆ…" ❤🔥
ಎಲ್ಲ ಓಕೆ, ಈ ವಿಡಿಯೋ ಯಾಕೆ?
ಅರ್ಥ ಆಯ್ತಾ? 🎥🤔😉#PlayBold #ನಮ್ಮRCB pic.twitter.com/RLK2FQmFD5
— Royal Challengers Bengaluru (@RCBTweets) October 30, 2024
ವಿರಾಟ್(Virat) ಕೊಹ್ಲಿ, ಎಬಿಡಿ(ABD), ಪ್ಲಾಪ್ ಡುಪ್ಲಸಿ, ಮಹಮ್ಮದ್ ಸಿರಾಜ್, ವಿಲ್ ಜಾಕ್ಸ್, ಕ್ರಿಸ್ ಗೇಲ್ ಯಶ್ ದಯಾಳ್, ಸ್ಮೃತಿ ಮಂದಾನಾ, ಕನ್ನಡತಿ ಶ್ರೇಯಾಂಕ್ ಪಾಟೀಲ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಹಂಚಿಕೊಂಡಿದೆ. ಕೊನೆಯಲ್ಲಿ ಮುಂದುವರೆಯುತ್ತದೆ ನಿರೀಕ್ಷಿಸಿ ಎಂದು ಬರೆಯಲಾಗಿದೆ. ಈ ಮೂಲಕ ಕನ್ನಡ ರಾಜ್ಯೋತ್ಸವದ ಹಿನ್ನಲೆ ಹಾಗೂ ಮುಂಬರುವ ಐಪಿಎಲ್ ಸೀಸನ್ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.