ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಶತಸಿದ್ಧ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ರಾಜೀನಾಮಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಆಗಿ ವಿಚಾರಣೆ ಎದುರಿಸುತ್ತಾರೋ, ಆರೋಪಿಯಾಗಿ ವಿಚಾರಣೆ ಎದುರಿಸುತ್ತಾರೋ ಎಂದು ಪ್ರಶ್ನಿಸಿದರು.
ಸಿಎಂ ಕುಟುಂಬವೇ ಆರೋಪಿ ಸ್ಥಾನದಲ್ಲಿದೆ. ಅವರು ಯಾವಾಗಲೋ ರಾಜೀನಾಮೆ ನೀಡಬೇಕಿತ್ತು. ರಾಜ್ಯದ ಜನತೆಗೆ 5 ವರ್ಷ ಸಿಎಂ ಆಗಿರ್ತೀನಿ ಎಂದು ಹೇಳಲಿ ನೋಡೋಣ. ಅದು ಸಾಧ್ಯವೇ ಇಲ್ಲ. ಹೀಗಾಗಿ ಖರ್ಗೆ, ಡಿ.ಕೆ ಶಿವಕುಮಾರ್ ಸೇರಿ ಎಲ್ಲರೂ ಚರ್ಚಿಸಿದ್ದಾರೆ. ರಾಜೀನಾಮೆ ಯಾವಾಗ ಎಂದು ಮುಖ್ಯಮಂತ್ರಿ ಹೇಳಬೇಕು ಅಂತಾ ವಾಗ್ದಾಳಿ ನಡೆಸಿದರು.