Ad imageAd image

ಶಿವಕಾಮಿ… ಬಿಕ್ಕುವಿಕೆಯ ಭಾಷೆ

Nagesh Talawar
ಶಿವಕಾಮಿ… ಬಿಕ್ಕುವಿಕೆಯ ಭಾಷೆ
WhatsApp Group Join Now
Telegram Group Join Now

ಮಲಯಾಳಂನ ಖ್ಯಾತ ಲೇಖಕಿ ಜಾನಮ್ಮ ಕುಂಞುಣ್ಣಿ ಅವರ ‘ಶಿವಕಾಮಿ’ ಕಾದಂಬರಿಯನ್ನು ಕನ್ನಡಕ್ಕೆ ಪ್ರಸಿದ್ಧ ಲೇಖಕರು, ಅನುವಾದಕರಾದ ಕೆ.ಪ್ರಭಾಕರನ್ ಅವರು ಅನುವಾದಿಸಿದ್ದಾರೆ. ಈ ಕೃತಿಗೆ ಮಲಯಾಳಂನ ಖ್ಯಾತ ಲೇಖಕ ಪ್ರಭಾವರ್ಮ ಬರೆದ ಮುನ್ನುಡಿಯ ಕೆಲವು ಮಾತುಗಳು ಇಲ್ಲಿವೆ…

ಟ್ರಾನ್ಸ್‌ಜಂಡರ್ ಸಮುದಾಯಕ್ಕೆ ಸೇರಿದ ಜನರ ದೈಹಿಕ ಮತ್ತು ಮಾನಸಿಕ ಜೀವನದ ಸಂಘರ್ಷಗಳು ನಮ್ಮ ಸಾಹಿತ್ಯ ಲೋಕಕ್ಕೆ ಸಾಮಾನ್ಯವಾಗಿ ಪರಕೀಯವಾದದ್ದು. 19ನೇ ಶತಮಾನದ ಕೊನೆಯಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಷ್ಟೇ ಈ ಸಮುದಾಯದ ಬದುಕು ಸಾಹಿತ್ಯ ಲೋಕದೊಳಗೆ ಪ್ರವೇಶ ಮಾಡಿತು, ಎನ್ನುವುದೇ ಸತ್ಯ ಸಂಗತಿ. ವರ್ಜೀನಿಯಾದಲ್ಲಿ, ಒಂದು ಘಟ್ಟದಲ್ಲಿ ಮಹಿಳಾ ಜೀವನವನ್ನೂ ಮತ್ತೊಂದು ಘಟ್ಟದಲ್ಲಿ ಪುರುಷ ಜೀವನವನ್ನೂ ಬದಲಿಸಿ ಬದಲಿಸಿ ನಡೆಸಬೇಕಾಗಿ ಬಂದ ಒಂದು ಪಾತ್ರವಿದೆ. ಆದರೆ ಒಂದೇ ಘಟ್ಟದಲ್ಲೇ ದ್ವಿಲಿಂಗಿ/ಉಭಯಲಿಂಗಿ ಜೀವನವನ್ನು ನಡೆಸಬೇಕಾಗಿದ್ದವರ ಆತ್ಮಸಂಘರ್ಷವು ಆಗಲೂ ಸಾಹಿತ್ಯವನ್ನು ಪ್ರವೇಶಿಸಿರಲಿಲ್ಲ. ಈ ಸಮುದಾಯಕ್ಕೆ ಸೇರಿದ Santa Khurai (ಸಂತಾ ಖುರಾಯ್) ಬರೆದ “ದ ಯಲ್ಲೋ ಸ್ಟ್ಯಾರೋ” (The Yellow Sparrow”), ಟ್ರಾನ್ಸ್‌ಜಂಡರ್ ಜೀವನದ ನೆನಪುಗಳಾಗಿವೆ. ಕಾಲ್ಪನಿಕತೆಯ ಗಡಿರೇಖೆಯೊಂದಿಗೆ ಒರಗಿ ನಿಂತಿರುವ ರೀತಿಯಲ್ಲಿ ಓದಬಹುದಾದ ಆ ನೆನಪುಗಳು, ಸಮಾಜದಿಂದ ಟ್ರಾನ್ಸ್‌ಜಂಡರ್‌ಗಳು ಎದುರಿಸುತ್ತಿರುವ ದೈಹಿಕ ಮತ್ತು ಮಾನಸಿಕ ಆಘಾತಗಳ ಒಂದು ರೇಖಾಚಿತ್ರವನ್ನು ಪ್ರಸ್ತುತಪಡಿಸುತ್ತದೆ. ಇವೆಲ್ಲದರ ನಂತರ, ಈ ಸಮಾಜದೊಳಗೆ ಬೆಂಕಿಯಂತೆ ಸುಡುವ ಜೀವನಾನುಭವಗಳು, ಸಾಹಿತ್ಯಕ್ಕೆ ನಿರೂಪಣೆಯ ರೂಪದಲ್ಲಿ ಪ್ರವೇಶ ಮಾಡುವುದನ್ನು, ಬೂಕರ್ ಬಹುಮಾನ ವಿಜೇತ ಅರುಂಧತಿ ರಾಯ್ ಅವರು “ದಿ ಮಿನಿಸ್ಟ್ರಿ ಆಫ್ ಅಟ್ಟೋಸ್ಟ್ ಹ್ಯಾಪಿನೆಸ್” (The Ministry of utmost Happiness) ಎನ್ನುವ ಕೃತಿಯಲ್ಲಿ ನೋಡಬಹುದಾಗಿದೆ.

ಶಿವಕಾಮ(ಕಾದಂಬರಿ)- ಮೂಲ- ಮಲಯಾಳಂ, ಲೇಖಕರು- ಜಾನಮ್ಮ ಕುಂಞುಣ್ಣ, ಕನ್ನಡಕ್ಕೆ- ಕೆ.ಪ್ರಭಾಕರನ್, ಪ್ರಕಾಶನ- ತಾರಾ ಪುಸ್ತಕ, ಮೈಸೂರು, ಪುಸ್ತಕಕ್ಕಾಗಿ ಸಂಪರ್ಕಿಸಿ- 9483352850

ಏಕಕಾಲದಲ್ಲಿ ಮೆಚ್ಚುಗೆಗೂ ತಿರಸ್ಕಾರಕ್ಕೂ ಒಳಗಾಗುವ ಒಂದು ಸಮುದಾಯದ ಹೃದಯ ವಿದ್ರಾವಕ ಬದುಕಿನ ಆಳಕ್ಕಿಳಿದು, ಅದರ ಸೂಕ್ಷ ಸತ್ಯಗಳನ್ನು ಕಪ್ಪು ಬಿಳುಪಿನ ಭಾಷೆಯಲ್ಲಿ ಶ್ರೀಮತಿ ಜಾನಮ್ಮ ಕುಂಞಂಣ್ಣೆ ಮಂಡಿಸುವುದನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗಿರುತ್ತದೆ. ತಿರಸ್ಕಾರಕ್ಕೊಳಪಡುತ್ತಿರಬಹುದು, ಆದರೆ, ಮೆಚ್ಚುಗೆಗೊಳಪಡುತ್ತಿದ್ದಾರೆಯೇ ಎಂದು ಪ್ರಿಯ ಓದುಗರಲ್ಲಿ ಕೆಲವರಾದರೂ ಆಶ್ಚರ್ಯಪಡುತ್ತಿರಬಹುದು. ಮೆಚ್ಚುಗೆಗೊಳಪಡುತ್ತಿದ್ದಾರೆನ್ನುವುದೇ ಸತ್ಯ.

(ಪ್ರಯಾಣ ಮಾಡಲು ಹೊರಡುವಾಗ ಈ ಸಮುದಾಯದವರೇನಾದರೂ ಎದುರುಗೊಂಡರೆ/ಮುಖಾಮುಖಿಯಾದರೆ, ಸಾಂಪ್ರದಾಯಿಕತೆಯ ನಂಬಿಕೆಯುಳ್ಳವರು ಇದನ್ನು ಶುಭಶಕುನವೆಂದು ಪರಿಗಣಿಸುತ್ತಾರೆ.)

ಸಾಮಾಜಿಕ ಜೀವನದ ಅಂಚಿಗೆ ತಳ್ಳಲ್ಪಟ್ಟ ಇವರ ಸಾಮೂಹಿಕ ಜೀವನದ ಕತ್ತಲೆಯ ಪಡಸಾಲೆಗಳನ್ನು ಪ್ರವೇಶಿಸಿ ಅವರ ಸತ್ಯವನ್ನು ತಿಳಿದುಕೊಳ್ಳುವುದು, ನಮ್ಮ ಬರಹಗಾರರ ಮನಸ್ಸಿನಲ್ಲಿ ಅಪರೂಪಕ್ಕೂ ಬಾರದಿರುವ ಆಶಯವಾಗಿಬಿಟ್ಟಿದೆ. ಆದರೆ, ಸಹೋದರತ್ವದ ಭಾವದಿಂದ ಅವರೊಳಗೆ ಪ್ರವೇಶಿಸುವುದಕ್ಕೂ ಅವರ ನೈಜವಾದ ಜೀವನಾನುಭವದ ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವುದಕ್ಕೂ ಅವುಗಳ ಸಮಸ್ತ ದುರಂತಗಳಿಗೆ ಮತ್ತು ಸೃಜನಶೀಲತೆಯೊಂದಿಗೆ ಅವುಗಳನ್ನು ವ್ಯಕ್ತಪಡಿಸುವ ಧೀರ ಪ್ರಯತ್ನವನ್ನು ಜಾನಮ್ಮ ಕುಂಂಞುಣ್ಣಿ ನಡೆಸಿದ್ದಾರೆ, ಅವರ ಹೊಸ ಕಾದಂಬರಿ ‘ಶಿವಕಾಮಿ’ಯ ಮೂಲಕ…

WhatsApp Group Join Now
Telegram Group Join Now
Share This Article