ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಆಕ್ಸಿಯಂ-4 ಮಿಷನ್ ಡ್ರ್ಯಾಗ್ ಗ್ರೇಸ್ ನೌಕೆಯಿಂದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಹಾಗೂ ಅವರ ತಂಡ ಮಂಗಳವಾರ ಸಂಜೆ ಭೂಮಿಗೆ ಮರಳಿದೆ. 20 ದಿನಗಳ ಬಳಿಕ ಬಾಹ್ಯಾಕಾಶ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಖುಷಿ ಎಲ್ಲರ ಮೊಗದಲ್ಲಿ ಕಂಡು ಬಂತು.
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಕಮಾಂಡರ್ ಪಿಗ್ಗಿ ವಿಟ್ಸನ್, ಮಿಷನ್ ತಜ್ಞ ಪೋಲೆಂಡ್ ನ ಸ್ಲಾವೊಸ್ಜ್ ಉಜ್ನಾನ್ ಸ್ಕಿ, ಹಂಗೇರಿಯ ಟಿಬೋರ್ ಕಾಪು ನೌಕೆಯಿಂದ ಹೊರ ಬಂದರು. ಜೂನ್ 25ರಂದು ಬಾಹ್ಯಾಕಾಶ ಯಾನ ಪ್ರಾರಂಭಿಸಲಾಯಿತು. 18 ದಿನಗಳ ಕಾಲ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿದ್ದು, ಸುಮಾರು 60 ಪ್ರಯೋಗಗಳನ್ನು ನಡೆಸಿದರು.