ಪ್ರಜಾಸ್ತ್ರ ಸುದ್ದಿ
ಫ್ಲೋರಿಡಾ(Florida): ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರು ಕಳೆದ ಜೂನ್ 5ರಂದು ಬೋಯಿಂಗ್ ಸಂಸ್ಥೆಯ ಸ್ಟಾರ್ ಲೈನರ್ ಗಗನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(Space Station) ಹೋಗಿದ್ದಾರೆ. 8 ದಿನಗಳ ಬಳಿಕ ಅಲ್ಲಿಂದ ಬರಬೇಕಾಗಿದ್ದ ಅವರು ತಾಂತ್ರಿಕ ಸಮಸ್ಯೆಯಿಂದ ಕಳೆದ 9 ತಿಂಗಳಿಂದ ಅಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ಇವರನ್ನು ವಾಪಸ್ ಕರೆದುಕೊಂಡು ಬರಲು ನಾಸಾದ ಕ್ರ್ಯೂ-10 ಮಿಷನ್(Crew-10 ) ಮೂಲಕ ನಾಲ್ವರು ಗಗನಯಾತ್ರಿಗಳು ಭಾನುವಾರ ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣ ತಲುಪಿದ್ದಾರೆ.
All the hugs. 🫶
The hatch of the SpaceX Dragon spacecraft opened March 16 at 1:35 a.m. ET and the members of Crew-10 entered the @Space_Station with the rest of their excited Expedition 72 crew. pic.twitter.com/mnUddqPqfr
— NASA's Johnson Space Center (@NASA_Johnson) March 16, 2025
ಕಳೆದ ಶುಕ್ರವಾರ ಯಶಸ್ವಿಯಾಗಿ ಈ ಮಿಷನ್ ಉಡಾವಣೆ ಮಾಡಲಾಗಿದೆ. ನಾಸಾದ ನಿಕೋಲ್ ಆಯೆರ್ಸ್, ಆಯನ್ ಮೆಕ್ಲೇನ್, ರಷ್ಯಾದ ಕಿರಲ್ ಪೆಸ್ಕೊವ್ ಹಾಗೂ ಜಪಾನಿನ ತಕುಯಾ ಒನಿಶಿ ಅವರನ್ನೊಳಗೊಂಡ ನಾಲ್ವರ ತಂಡ ಹೋಗಿದ್ದು, ಮಾರ್ಚ್ 19ರಂದು ಇವರನ್ನು ವಾಪಸ್ ತರಲಿದೆ. ಈ ಕ್ಷಣಕ್ಕೆ ಎಲ್ಲರೂ ಕಾತುರದಿಂದ ಎದುರು ನೋಡುತ್ತಿದ್ದಾರೆ.