Ad imageAd image

ಸುನಿತಾ ವೀಲಿಯಮ್ಸ್, ಬುಚ್ ವಾಪಸ್ ಕರೆ ತರಲು ಹೋದ ಸ್ಪೇಸ್ ಎಕ್ಸ್

ನಾಸಾ ವಿಜ್ಞಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ಅವರು ಬಾಹ್ಯಾಕಾಶ ಅಧ್ಯಯನಕ್ಕೆ ತೆರಳಿದವರು ತಾಂತ್ರಿಕ ಕಾರಣಗಳಿಂದಾಗಿ

Nagesh Talawar
ಸುನಿತಾ ವೀಲಿಯಮ್ಸ್, ಬುಚ್ ವಾಪಸ್ ಕರೆ ತರಲು ಹೋದ ಸ್ಪೇಸ್ ಎಕ್ಸ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಾಷಿಂಗ್ಟನ್(Washington DC): ನಾಸಾ(NASA) ವಿಜ್ಞಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ಅವರು ಬಾಹ್ಯಾಕಾಶ ಅಧ್ಯಯನಕ್ಕೆ ತೆರಳಿದವರು ತಾಂತ್ರಿಕ ಕಾರಣಗಳಿಂದಾಗಿ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಹೀಗಾಗಿ ಎಲ್ಲರಲ್ಲಿಯೂ ಆತಂಕ ಮೂಡಿದೆ. ಈಗ ಇವರನ್ನು ವಾಪಸ್ ಕರೆದುಕೊಂಡು ಬರಲು ಖಾಸಗಿ ಬಾಹ್ಯಾಕಾಶ ಸಂಸ್ಥೆಯ ಸ್ಪೇಸ್((SpaceX) ಎಕ್ಸ್ ಆಕಾಶ ತಲುಪಿದೆ. ವಿಶ್ವದ ದೊಡ್ಡ ದೊಡ್ಡ ಸಂಸ್ಥೆಗಳು ಮಾಡದನ್ನು ಇದು ಮಾಡುತ್ತಿದೆ. ಹೀಗಾಗಿ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ಭೂಮಿಗೆ ವಾಪಸ್ ಆಗುತ್ತಾರೆ ಎನ್ನುವ ವಿಶ್ವಾಸ ಮೂಡಿದೆ.

ಇದೆ ಜೂನ್ ತಿಂಗಳಲ್ಲಿ ಈ ಜೋಡಿ ಬೋಯಿಂಗ್ ಸ್ಟಾರ್ ಲೈನರ್ ನೌಕೆಯ ಮೂಲಕ ಬಾಹ್ಯಾಕಾಶ ನಿಲ್ದಾಣ ಸೇರಿದ್ದಾರೆ. ನಂತರ ಅಲ್ಲಿಂದ ವಾಪಸ್ ಬರಬೇಕು ಎನ್ನುವಷ್ಟರಲ್ಲಿ ನೌಕೆಯಲ್ಲಿ ಹೀಲಿಯಂ ಸೋರಿಕೆಯಾಗಿದೆ. ಇದರಿಂದಾಗಿ ಇದುವರೆಗೂ ವಾಪಸ್ ಬರಲು ಆಗುತ್ತಿಲ್ಲ. ನಾಸಾ ಸೇರಿ ವಿಶ್ವದ ಬೃಹತ್ ಬಾಹ್ಯಾಕಾಶ ಸಂಸ್ಥೆಗಳು ಸಮಸ್ಯೆ ಸರಿಪಡಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಈಗ ಸ್ಪೇಸ್ ಎಕ್ಸ್ ಆಕಾಶಕ್ಕೆ ಹಾರಿದೆ. ಇದು ಸುನಿತಾ ವಿಲಿಯಮ್ಸ್(Sunita Williams) ಹಾಗೂ ಬುಚ್ ವಿಲ್ಮೋರ್(Butch Wilmore) ಅವರನ್ನು ಕೂಡಲೇ ಭೂಮಿಗೆ ಕರೆದುಕೊಂಡು ಬರಲ್ಲ. ಅವರು ವಾಪಸ್ ಬರುವುದು ಮುಂದಿನ ವರ್ಷ ಫೆಬ್ರವರಿ ಎಂದು ಹೇಳಲಾಗುತ್ತಿದೆ. ಅದೇನೆ ಇರಲಿ ವಿಜ್ಞಾನಿಗಳು ಸುರಕ್ಷಿತವಾಗಿ ವಾಪಸ್ ಬರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article