ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕನ್ನಡ ಭಾಷೆಗೆ ಸಂಬಂಧಿಸಿದಂತೆ ನಟ ಕಮಲ್ ಹಾಸನ್ ನೀಡಿದ ಹೇಳಿಕೆಯಿಂದ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಮಾಡಿದರು. ದೂರು ದಾಖಲಿಸಿದರು. ಕೊನೆಗೆ ಅವರ ಥಗ್ ಲೈಫ್ ಚಿತ್ರ ಬಿಡುಗಡೆಗೆ ಅವಕಾಶ ನೀಡಲಿಲ್ಲ. ಈ ಸಂಬಂಧ ಬೆಂಗಳೂರಿನ ಎಂ.ಮಹೇಶ್ ರೆಡ್ಡಿ ಎಂಬುವರು ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್, ಸಿಬಿಎಫ್ ಸಿ ಯಿಂದ ಪ್ರಮಾಣಪತ್ರ ಸಿಕ್ಕ ಬಳಿಕ ಚಿತ್ರದ ನಿಷೇಧ ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ.
ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಬಂದೂಕು ತೋರಿಸಿ ಹೆದರಿಸಬಾರದು. ಸಿನಿಮಾ ಬಿಡುಗಡೆ ಕುರಿತು 24 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ನಟ ಕಮಲ್ ಹಾಸನ್ ಗೆ ವಿಷಾದ ಅಥವ ಕ್ಷಮೆ ಕೇಳುವಂತೆ ಹೇಳುವುದಕ್ಕೆ ಕರ್ನಾಟಕ ಹೈಕೋರ್ಟ್ ಗೆ ಯಾವುದೇ ಹಕ್ಕಿಲ್ಲ. ಜನರು ಅದರ ಬಗ್ಗೆ ಚರ್ಚಿಸಲಿ ಎಂದು ನ್ಯಾಯಮೂರ್ತಿಗಳಾದ ಉಜ್ವಲ್ ಭುಯಾನ್ ಹಾಗೂ ಮನಮೋಹನ್ ಅವರಿದ್ಧ ಪೀಠ ಹೇಳಿದೆ. ಗುರುವಾರಕ್ಕೆ ಅರ್ಜಿಯನ್ನು ಮುಂದೂಡಿದೆ.