ಕಪ್ ಜೊತೆಗೆ ತವರಿಗೆ ಬಂದ ಟೀಂ ಇಂಡಿಯಾ

67

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಐಸಿಸಿ ಟಿ-20 ವರ್ಲ್ಡ್ ಕಪ್-2024 ಜಯಿಸಿರುವ ಟೀಂ ಇಂದು ಗುರುವಾರ ಮುಂಜಾನೆ ತವರಿಗೆ ಮರಳಿದೆ. ವೆಸ್ಟ್ ವಿಂಡೀಸ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೌಥ್ ಆಫ್ರಿಕಾ ವಿರುದ್ಧ 7 ರನ್ ಗಳಿಂದ ಗೆದ್ದು 2ನೇ ಬಾರಿಗೆ ಚುಟುಕು ಚಾಂಪಿಯನ್ ಆಗಿದೆ.

ಚಂಡಮಾರುತದಿಂದಾಗಿ ತವರಿಗೆ ಮರಳುವುದು ಎರಡ್ಮೂರು ದಿನಗಳ ಕಾಲ ತಡವಾಗಿತ್ತು. ಇಂದು ಮುಂಜಾನೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಎಲ್ಲರಿಗೂ ಭರ್ಜರಿ ಸ್ವಾಗತ ನೀಡಲಾಯಿತು. ಜೊತೆಗೆ ಬಿಗಿ ಭದ್ರತೆ ಸಹ ಒದಗಿಸಲಾಗಿದೆ.

ವಿಮಾನ ನಿಲ್ದಾಣದಿಂದ ಐಟಿಸಿ ಮಯೂರ್ ಹೋಟೆಲ್ ಗೆ ತೆರಳಿದರು. ಅಲ್ಲಿ ವಿಶ್ವಕಪ್ ಮಾದರಿಯ ಕೇಕ್ ಸಿದ್ಧಪಡಿಸಲಾಗಿತ್ತು. ಅದನ್ನು ಕಟ್ ಮಾಡಿ ಸಂಭ್ರಮಿಸಿದರು. ಬಳಿಕ ಪ್ರಧಾನಿ ಮೋದಿಯವರೊಂದಿಗೆ ಆಟಗಾರರು ಚರ್ಚೆ ನಡೆಸಿದರು. ಸಂಜೆ ಮುಂಬೈನ ವಾಖಂಡೆ ಕ್ರೀಡಾಂಗಣದಲ್ಲಿ 5 ಗಂಟೆಯಿಂದ 7ಗಂಟೆಯ ತನಕ ವಿಜಯೋತ್ಸವ ನಡೆಯಲಿದೆ.




error: Content is protected !!