ಪ್ರಜಾಸ್ತ್ರ ಸುದ್ದಿ
ಚಂಡೀಗಢ(chandigarh): ರಸ್ತೆ ಪಕ್ಕದಲ್ಲಿ ನಿಂತಿದ್ದ ವಾಹನಕ್ಕೆ ಟ್ರಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ 8 ಜನರು ಮೃತಪಟ್ಟು, 10 ಜನರು ಗಾಯಗೊಂಡ ಭೀಕರ ಅಪಘಾತ(Accident) ಕಳೆದ ರಾತ್ರಿ ಹಿಸ್ಸಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಿಧರನಾ ಗ್ರಾಮದ ಹತ್ತಿರ ನಡೆದಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ. ಕುರುಕ್ಷೇತ್ರದಿಂದ ರಾಜಸ್ಥಾನದ ಗೂಗಮೇಡಿ ದೇವಸ್ಥಾನಕ್ಕೆ ಹೊರಟ್ಟಿದ್ದ ಭಕ್ತರ ವಾಹನಕ್ಕೆ ಟ್ರಕ್ ಡಿಕ್ಕೆ ಹೊಡೆದಿದೆ.
ಹರಿಯಾಣದ(haryana) ಜಿಂದ್ ಜಿಲ್ಲೆಯಲ್ಲಿ ಅಪಘಾತ ನಡೆದಿದೆ. ಗಾಯಾಳುಗಳನ್ನು ಜಿಂದ್, ಆಗ್ರೋಹಾ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವಸ್ಥಾನಕ್ಕೆ ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ವಾಹನ ರಸ್ತೆ ಪಕ್ಕ ನಿಂತಿದೆ. ಆದರೆ, ವೇಗವಾಗಿ ಬಂದ ಟ್ರಕ್ ಇದಕ್ಕೆ ಗುದ್ದಿದೆ. ಇದರ ಪರಿಣಾಮ ಇಬ್ಬರು ಮಹಿಳೆಯರು ಸೇರಿ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ.