ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy) ಬುಧವಾರದಿಂದ ಶುರುವಾಗುತ್ತಿದ್ದು, ಪಾಕಿಸ್ತಾನ ಹಾಗೂ ದುಬೈನಲ್ಲಿ ಪಂದ್ಯಗಳು ನಡೆಯಲಿವೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯುತ್ತವೆ. ಭದ್ರತೆಯ ದೃಷ್ಟಿಯಿಂದ ಟೀಂ ಇಂಡಿಯಾದ(Team India) ಯಾವುದೇ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯುತ್ತಿಲ್ಲ. ಫೆಬ್ರವರಿ 19ರಿಂದ ಮಾರ್ಚ್ 9ರ ತನಕ ಏಕದಿನ ಪಂದ್ಯಗಳು ನಡೆಯಲಿವೆ. 8 ಚಾಂಪಿಯನ್ಸ್ ಟೋಫಿಯಲ್ಲಿ ಭಾರತ 2 ಬಾರಿ ಚಾಂಪಿಯನ್ಸ್ ಎನಿಸಿಕೊಂಡಿದೆ. 4 ಬಾರಿ ಫೈನಲ್ ಗೆ ಬಂದಿದೆ.
ಟೀಂ ಇಂಡಿಯಾದ ಕಿಂಗ್ ಕೊಹ್ಲಿ(Virat Kohli) ಮತ್ತಷ್ಟು ದಾಖಲೆಗಳನ್ನು ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. ಅತಿ ವೇಗವಾಗಿ 14 ಸಾವಿರ ರನ್ ಗಳನ್ನು ಮಾಡುವ ಸನೀಹದಲ್ಲಿದ್ದಾರೆ. ಇದಕ್ಕೆ ಬೇಕಾಗಿರುವುದು ಕೇವಲ 37 ರನ್ ಗಳು ಮಾತ್ರ. ಈ ಸಾಧನೆ ಮಾಡಿದರೆ ಸಚಿನ್ ತೆಂಡೂಲ್ಕರ್, ಶ್ರೀಲಂಕಾದ ಕುಮಾರ್ ಸಂಗಕ್ಕರ್ ನಂತರದ ಸ್ಥಾನದಲ್ಲಿ ಕೊಹ್ಲಿ ಬರಲಿದ್ದಾರೆ. ಇನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ 6 ಅರ್ಧ ಶತಕಗಳನ್ನು ಗಳಿಸಿದ ಟೀಂ ಇಂಡಿಯಾ ಮಾಜಿ ಆಟಗಾರ, ಕೋಚ್ ರಾಹುಲ್ ದ್ರಾವಿಡ್ ಮೊದಲಿದ್ದು, ಕೊಹ್ಲಿ 5 ಅರ್ಧ ಶತಕ ಬಾರಿಸಿದ್ದಾರೆ. ದ್ರಾವಿಡ್ ರೆಕಾರ್ಡ್ ಬ್ರೇಕ್ ಮಾಡುವ ಲಕ್ಷಣಗಳೆಲ್ಲವೂ ಇವೆ. ಇನ್ನು ಟೂರ್ನಿಯಲ್ಲಿ ಭಾರತ ತಂಡಕ್ಕೆ ಜಸ್ಪ್ರೀತ್ ಬೂಮ್ರಾ ಅನುಪಸ್ಥಿತಿ ಕಾಡಲಿದೆ.