ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸೌರಮಂಡಲ ಪ್ರವೇಶಿಸಿರುವ ಹೊರಗಿನ ಧೂಮಕೇತುವೊಂದು ಬುಧವಾರ ಭೂಮಿಗೆ ಹತ್ತರದಿಂದ ಹಾಯ್ದು ಹೋಗಲಿದೆ ಎನ್ನುವ ವಿಚಾರ ಖಗೋಳ ವಿಜ್ಞಾನಿಗಳು ಸೇರಿದಂತೆ ಎಲ್ಲರಲ್ಲಿ ಕುತೂಹಲ ಮೂಡಿದೆ. ಸೌರಮಂಡಲದ ಹೊರಗಿನ ಧೂಮಕೇತುವಿನ ನಿರ್ದಿಷ್ಟ ಪಥ, ಅದರಲ್ಲಿನ ರಾಸಾನಿಕ ಅಂಶಗಳು, ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.
ಈ ಧೂಮಕೇತು ಸೌರಮಂಡಲ ಪ್ರವೇಶಿಸಿದ ವಿಚಾರವನ್ನು ಕಳೆದ ಜುಲೈನಲ್ಲಿ ವಿಜ್ಞಾನಿಗಳು ಪತ್ತೆ ಮಾಡಿದ್ದರು. ಜಗತ್ತಿನ ಅತ್ಯಂತ ಬಲಿಷ್ಠ ದೂರದರ್ಶಕಗಳು ಈ ಧೂಮಕೇತುವಿನ ಚಲನವಲನದ ಮೇಲೆ ಕಣ್ಣಿಟ್ಟಿವೆ. ಮತ್ತೊಂದು ಸೌರಮಂಡಲದ ಧೂಮಕೇತುವೊಂದು ಕಾಣಿಸುವ ವಸ್ತುವಾಗಿರುವುದಿಂದ ಖಗೋಳ ವಿಜ್ಞಾನಿಗಳಲ್ಲಿ ಕುತೂಹಲ ಮೂಡಿದೆ. ಇನ್ನು 2017 ಹಾಗೂ 2019ರಲ್ಲಿ 2I/Borisov ಸೌರಮಂಡಲದ ಆಚೆಗಿನ ವಸ್ತುಗಳು ಕಂಡು ಬಂದಿದ್ದವು.
ಎಷ್ಟೋ ಲಕ್ಷ ವರ್ಷಗಳ ಹಿಂದೆ ಮತ್ತೊಂದು ಸೌಡಮಂಡಲದಿಂದ ಹೊರಚಿಮ್ಮಿದ ಧೂಮಕೇತುವಿದು. ಹೀಗಾಗಿ ಈ ವಸ್ತು ಹೇಗಿರುತ್ತೆ ಎಂಬುದರ ಕುರಿತು ಅಧ್ಯಯನಗಳು ನಡೆದಿವೆ. ಇಂಗಾಲದ ಡೈಆಕ್ಸೈಡ್, ಸೈನೈಡ್, ನಿಕ್ಕಿಲ್ ಆವಿ ಇರುವುದರಿಂದ ಸೂರ್ಯನ ಬೆಳಕಿನಲ್ಲಿ ವಿಶೇಷವಾಗಿ ಕಾಣಿಸುವ ಗುಣವಿದೆ. ದೂರದರ್ಶಕವಿಲ್ಲದೆ ಇದನ್ನು ನೋಡುವುದು ಅಸಾಧ್ಯ. 200 ಮಿ.ಮೀ ಅಪಾರ್ಚರ್ ಗಾತ್ರದ ದೂರದರ್ಶಕ ಬೆಂಕು ಎಂದು ವಿಜ್ಞಾನಿಗಳು ಹೇಳುತ್ತಾರೆ.




