ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಉತ್ತರ ಪ್ರದೇಶದ ಪಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಎಲ್ಲರ ಆಕರ್ಷಣೆಯಾಗಿ ನ್ಯಾಷನಲ್ ಕ್ರಶ್ ಆಗಿರುವ ಮೋನಾಲಿಸಾಳಿಗೆ ಮೇಕಪ್ ಮಾಡಲಾಗಿದೆ. ಈ ಮೂಲಕ ಸಹಜ ಸುಂದರಿಯನ್ನು ಸಲೂನಿಗೆ ಕರೆದುಕೊಂಡು ಹೋಗಿ ಮೇಕಪ್ ಮಾಡಿ ಮಾರ್ಡನ್ ಟಚ್ ಕೊಡಲಾಗಿದೆ. ಇದು ಕೂಡ ಈಗ ವೈರಲ್ ಆಗಿದೆ. ಸಲೂನ್ ವೊಂದರ ಮಾಲೀಕಿ ಮೋನಾಲಿಸಾಳ ಗಟೆಪ್ ಚೇಂಜ್ ಮಾಡಿದ್ದಾರೆ.
ಈ ಬಗ್ಗೆ ಹಲವರು ಹಲವು ರೀತಿಯಲ್ಲಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಮುಗ್ಧ ಹುಡುಗಿಯನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳಲು ಶುರು ಮಾಡಿದರು ಎಂದು ಪ್ರತಿಕ್ರಿಯೆಗಳು ಬರುತ್ತಿವೆ. ಸಹಜ ನಗು ಮರೆಯಾಗಿ ಕೃತಕ ಸ್ಮೈಲ್ ಮಾಡುವುದನ್ನು ನೋಡಿದವರು, ತಮ್ಮ ಬದುಕು ಕಟ್ಟಿಕೊಳ್ಳಲು ಬಂದಿದ್ದ ಹುಡುಗಿಯನ್ನು ತಮ್ಮ ಟಿಆರ್ ಪಿ ಸಲುವಾಗಿ ಬಳಸಿಕೊಳ್ಳದೆ ಸಾಧ್ಯವಾದಷ್ಟರ ಮಟ್ಟಿಗೆ ಅವರಿಗೆ ಸಹಾಯ ಮಾಡಿ. ಈ ರೀತಿ ಮೇಕಪ್ ಮಾಡಿ ಪಬ್ಲಿಷಿಟಿ ಮೋಹದಲ್ಲಿ ಅವರನ್ನು ಸಿಲುಕಿಸಬೇಡಿ ಎನ್ನುತ್ತಿದ್ದಾರೆ.