ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜಧಾನಿ ಬೆಂಗಳೂರಿನಲ್ಲಿ ಭಾಷೆಯ ವಿಚಾರಕ್ಕೆ ಆಗಾಗ ಕಿಡಿ ಹೊತ್ತಿಕೊಳ್ಳುತ್ತೆ. ಅನ್ಯ ರಾಜ್ಯದಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡವರಲ್ಲಿ ಕೆಲವರು ಕನ್ನಡದ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಕನ್ನಡಿಗರ ಆಕ್ರೋಶಕ್ಕೆ ಅವರು ಬಲಿಯಾಗುತ್ತಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕನ್ನಡ ಕಲಿಯದ ಉತ್ತರ ಭಾರತ ಹಾಗೂ ನೆರೆಯ ರಾಜ್ಯಗಳ ಜನರಿಗೆ ಬೆಂಗಳೂರಿಗೆ ಪ್ರವೇಶವಿಲ್ಲ ಎನ್ನುವ ಬರಹವೊಂದು ವೈರಲ್ ಆಗಿದೆ.
Bengaluru is closed for north India and neighbouring states who doesn't want to learn Kannada
They don't need Bengaluru when they can't respect language and culture #Kannada #Bengaluru #Karnataka pic.twitter.com/YNmgQwJToH
— ಬಬ್ರುವಾಹನ (@Paarmatma) January 23, 2025
ಬಬ್ರುವಾಹನ ಹೆಸರಿನ ಎಕ್ಸ್ ಖಾತೆಯಲ್ಲಿ ಬೆಂಗಳೂರು ಬಂದ್ ಎನ್ನುವ ಬೋರ್ಡ್ ಇರುವ ಚಿತ್ರ ಪೋಸ್ಟ್ ಮಾಡಲಾಗಿದೆ. ಇದರ ಜೊತೆಗೆ ಕನ್ನಡ ಕಲಿಯದ ಉತ್ತರ ಭಾರತ ಹಾಗೂ ನೆರೆಯ ರಾಜ್ಯದವರಿಗೆ ಬೆಂಗಳೂರು ಬಂದ್.. ಕನ್ನಡ ಭಾಷೆ ಹಾಗೂ ಸಂಸ್ಕೃತಿಗೆ ಗೌರವ ಕೊಡದವರಿಗೆ ಬೆಂಗಳೂರಿನ ಅಗತ್ಯವಿಲ್ಲ ಎಂದು ಬರೆಯಲಾಗಿದೆ. ಇದಕ್ಕೆ ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈವರೆಗೂ 1.20 ಲಕ್ಷ ಜನರು ನೋಡಿದ್ದಾರೆ.