ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಇವತ್ತಿನ ದಿನದಲ್ಲಿ ಜನರು ಊಟ, ನಿದ್ದೆಯಿಲ್ಲದೆ ಇರ್ತಾರೆ. ಸಾಮಾಜಿಕ(Social Media) ಜಾಲತಾಣ, ಡೇಟಾ ಇಲ್ಲಂದರೆ ಇರಲ್ಲ. ಆದರೂ ಆಗಾಗ ಸರ್ವರ್ ಸಮಸ್ಯೆ ಎದುರಿಸಿದಾಗ ಜೀವ ಹೋದವರಂತೆ ಮಾಡುತ್ತಾರೆ. ಇದೇ ರೀತಿ ಬುಧವಾರ ರಾತ್ರಿ ಮೆಟಾ(Meta) ಸಂಸ್ಥೆಯ ಸಾಮಾಜಿಕ ಜಾಲತಾಣಗಳು ಕೆಲ ಕಾಲ ಸ್ಥಗಿತಗೊಂಡಿದ್ದವು. ಜಗತ್ತಿನಾದ್ಯಂತ ವಾಟ್ಸಪ್, ಇನ್ಸ್ ಟಾಗ್ರಾಮ್, ಫೇಸ್ ಬುಕ್ ಸ್ಥಗಿತಗೊಂಡಿದ್ದವು.
ಮಧ್ಯರಾತ್ರಿಯ ತನಕ ಈ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಇದರಿಂದ ಅನೇಕರು ಪರದಾಡಿದ್ದಾರೆ. ಸರ್ವರ್ ಡೌನ್(Down) ಆಗಿದ್ದರಿಂದ ಲಾಗಿನ್ ಆಗಲು ಸಹ ಸಮಸ್ಯೆಯಾಗಿದೆ. ಮೆಸೇಜ್ ಕಳಿಸಿರುವುದು ಸಹ ಹೋಗುತ್ತಿರಲಿಲ್ಲ. ಇದೀಗ ಎಲ್ಲ ಸೇವೆಗಳು ಸಹಜ ಸ್ಥಿತಿಗೆ ಬಂದಿವೆ ಎಂದು ಮೆಟಾ ಸಂಸ್ಥೆ ತಿಳಿಸಿದೆ.