ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಕರ್ನಾಟಕದ ಹಂಪಿಯ ಹತ್ತಿರ ಇತ್ತೀಚೆಗೆ ಇಸ್ರೇಲ್ ಮೂಲದ ಪ್ರವಾಸಿ ಹಾಗೂ ಇನ್ನೋರ್ವ ಮಹಿಳೆಯ ಮೇಲಿನ ಅತ್ಯಾಚಾರ(Rape) ಪ್ರಕರಣದ ತನಿಖೆ ನಡೆಯುತ್ತಿದೆ. ಇದರ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಇನ್ ಸ್ಟಾಗ್ರಾಮ್(Instagram) ಗೆಳೆಯನನ್ನು ನಂಬಿ ದೆಹಲಿಗೆ ಬಂದಿದ್ದ ವಿದೇಶಿ ಮಹಿಳೆ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ಪ್ರಕರಣ ಸಂಬಂಧ ಆರೋಪಿ ಕೈಲಾಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇತನ ಸ್ನೇಹಿತ ವಾಸಿಮ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಕೆಲವು ತಿಂಗಳ ಹಿಂದೆ ಬ್ರಿಟನ್ ನ ಲಂಡನ್(UK) ಮೂಲದ ಮಹಿಳೆಯೊಂದಿಗೆ ಕೈಲಾಶ್ ಇನ್ ಸ್ಟಾಗ್ರಾಮ್ ಮೂಲಕ ಸಂಪರ್ಕ ಹೊಂದಿದ್ದ. ಆಕೆ ಇತ್ತೀಚೆಗೆ ಗೋವಾ, ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದಾಳೆ. ಇಲ್ಲಿಗೆ ಬರಲು ಕೈಲಾಶ್ ಗೆ ಹೇಳಿದ್ದಾಳೆ. ತನಗೆ ಬರಲು ಸಾಧ್ಯವಿಲ್ಲ. ನೀನೆ ದೆಹಲಿಗೆ ಬಾ ಎಂದಿದ್ದಾನೆ. ಹೀಗಾಗಿ ಮಹಿಳೆ ಮಂಗಳವಾರ ಸಂಜೆ ದೆಹಲಿಗೆ ಬಂದು ಮಹಿಪಾಲಪುರದ ಹೋಟೆಲ್ ವೊಂದರಲ್ಲಿ ಉಳಿದುಕೊಂಡಿದ್ದಳು. ಇಲ್ಲಿಗೆ ಆಕೆಯನ್ನು ಭೇಟಿಯಾಗಲು ಸ್ನೇಹಿತ ವಾಸಿಮ್ ಜೊತೆಗೆ ಬಂದಿದ್ದಾನೆ.
ಎಲ್ಲರೂ ಒಟ್ಟಿಗೆ ಊಟ ಮಾಡಿದ್ದಾರೆ. ರಾತ್ರಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಮರುದಿನ ಮುಂಜಾನೆ ವಸಂತ್ ಕುಂಜ್ ಪೊಲೀಸ್ ಠಾಣೆಗೆ ಬಂದು ಮಹಿಳೆ ದೂರು ದಾಖಲಿಸಿದ್ದಾಳೆ. ತನ್ನೊಂದಿಗೆ ಸರಿಯಾಗಿ ಇಂಗ್ಲಿಷ್ ಮಾತನಾಡಲು ಬರದೆ ಗೂಗಲ್ ಅನುವಾದ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಇದೀಗ ಕೈಲಾಶ್ ಹಾಗೂ ವಾಸಿಮ್ ನನ್ನು ಬಂಧಿಸಲಾಗಿದೆ. ಯಾರನ್ನು ನಂಬಿ ಎಲ್ಲಿಗೂ ಹೋಗಬಾರದ ಸ್ಥಿತಿ ನಿರ್ಮಾಣವಾಗಿದೆ. ಸ್ನೇಹಿತರೆಂದುಕೊಂಡವರಿಂದಲೂ ನೀಚ ಕೃತ್ಯಗಳು ನಡೆಯುತ್ತಿವೆ.