ಪ್ರಜಾಸ್ತ್ರ ಸುದ್ದಿ
ಇವತ್ತು ಜನರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಮೊಬೈಲ್(Mobile) ನಲ್ಲಿ ಡೇಟಾ ಇಲ್ಲದಿದ್ದೆ ತಲೆ ಚಿಟ್ ಹಿಡಿದಂತೆ ಟೆನ್ಷನ್ ಮಾಡಿಕೊಳ್ಳುತ್ತಾರೆ. ದಿನದ ಮುಕ್ತಾಯಕ್ಕೂ ಮೊದಲೇ ನೆಟ್ ಖಾಲಿ ಆಯ್ತು ಅಂದರೆ ಎಲ್ಲಿಲ್ಲದ ಆಕ್ರೋಶ ಬರುತ್ತೆ. ಹೀಗೆ ಆಗಬಾರದು ಅಂದರೆ ಕೆಲವೊಂದಿಷ್ಟು ಟಿಪ್ಸ್ ಬಳಸಿ ನಿಮ್ಮ ನಿತ್ಯದ ಡೇಟಾ(Data) ಬೇಗ ಖಾಲಿಯಾಗದಂತೆ ಬಳಸಬಹುದು. ನಿಮಗೆ ಅವಶ್ಯಕತೆಯಿಲ್ಲದ ಅಪ್ಲಿಕೇಷನ್ ಗಳನ್ನು ಆಫ್ ಮಾಡುವುದು. ಹೌದು ಮೊಬೈಲ್ ಸ್ಕ್ರೀನ್ ನೋಡಿದರೆ ಅಲ್ಲಿ ಹತ್ತಾರ ಅಪ್ಲಿಕೇಷನ್ ಗಳು ಕಾಣಿಸುತ್ತವೆ. ಅವುಗಳಲ್ಲಿ ನಿಮಗೆ ಬೇಡವಾದುದ್ದನ್ನು ಸೆಟ್ಟಿಂಗ್ಸ್ ನಲ್ಲಿ ಹೋಗಿ ಆಫ್ ಮಾಡಿ.
ಕೆಲವೊಂದು ಅಪ್ಲಿಕೇಷನ್(Application)ಗಳು ನೀವು ಬಳಕೆ ಮಾಡದೆಯಿದ್ದರೂ ಆನ್ ಇರುವುದರಿಂದ ಡೇಟಾ ಬಳಕೆಯಾಗುತ್ತೆ. ಇನ್ನು ಕೆಲವು ಅಪ್ಲಿಕೇಷನ್ ಗಳಿಗೆ ವೈಫೈ(Wife) ಮೂಲಕ ಅಪ್ ಡೇಟ್ ಮಾಡಿಕೊಳ್ಳುವಂತೆ ಸೆಟ್ಟಿಂಗ್ ಮಾಡಿ. ಆಗ ನೋಟಿಫಿಕೇಷನ್ ಬರುತ್ತೆ. ಇಲ್ಲದಿದ್ದರೆ ತನ್ನಷ್ಟಕ್ಕೆ ತಾನೆ ಅಪ್ ಡೇಟ್ ಆಗುವುದರಿಂದಲೂ ಡೇಟಾ ಬೇಗ ಖಾಲಿಯಾಗುತ್ತೆ. ಹಾಗೇ ವಾಟ್ಸಪ್(Whatsapp) ಸೆಟ್ಟಿಂಗ್ ನಲ್ಲಿ ಹೋಗಿ ಸ್ಥಳ ಸೇವೆ ಆಫ್ ಮಾಡಿ. ಸ್ಥಳ ಸೇವೆ ಆನ್ ಇರುವುದರಿಂದಲೂ ಡೇಟಾ ವೇಗವಾಗಿ ಖಾಲಿಯಾಗಲೂ ಒಂದು ಕಾರಣ. ನೀವು ವಿಡಿಯೋಗಳನ್ನು, ಸಿನಿಮಾಗಳ್ನು ನೋಡಲು ಬಳಸುವ ಅಪ್ಲಿಕೇಷನ್ ಗಳಲ್ಲಿ ಗುಣಮಟ್ಟವನ್ನು ಕಡಿಮೆ ಮಾಡಿಕೊಳ್ಳಿ. ಹೈಕ್ವಾಲಿಟಿ ಇಡುವುದರಿಂದ ಡೇಟಾ ಹೆಚ್ಚಿಗೆ ಬಳಕೆಯಾಗುತ್ತೆ. ಹೀಗಾಗಿ ನಿಮ್ಮ ಮೊಬೈಲ್ ನಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ನೋಡಿ.