ಪಾನಿಪುರಿ, ಆಮ್ಲೇಟ್ ತಿಂದ 20 ವಿದ್ಯಾರ್ಥಿಗಳು ಅಸ್ವಸ್ಥ

99

ಪ್ರಜಾಸ್ತ್ರ ಸುದ್ದಿ

ರಾಯಚೂರು: ಇಲ್ಲಿಯ ವಿಶ್ವವಿದ್ಯಾಲಯದ ಮುಂಭಾಗದಲ್ಲಿನ ರಸ್ತೆಬದಿಯಲ್ಲಿ ಪಾನಿಪುರಿ ಹಾಗೂ ಆಮ್ಲೇಟ್ ತಿಂದ 20 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮುಂಭಾಗದಲ್ಲಿನ ರಸ್ತೆಬದಿಯಲ್ಲಿ 20 ವಿದ್ಯಾರ್ಥಿನಿಯರು ಪಾನಿಪುರಿ, ಆಮ್ಲೇಟ್ ಸೇವಿಸಿದ್ದರು. ಇವರಿಗೆ ರಾತ್ರಿ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರು ಗುಣಮುಖರಾಗಿದ್ದಾರೆ ಎಂದು ವಿವಿ ಕುಲಪುರ ವೀರನಗೌಡ ತಿಳಿಸಿದ್ದಾರೆ.




error: Content is protected !!