6 ನಕಲಿ ಪತ್ರಕರ್ತರ ಬಂಧನ

308

ಪ್ರಜಾಸ್ತ್ರ ಸುದ್ದಿ

ರಾಯಚೂರು: ಪತ್ರಕರ್ತರೆಂದು ಹೇಳಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಮೂವರು ಯುವತಿಯರು ಸೇರಿ 6 ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರದೀಪಗೌಡ, ರಾಜು.ಬಿ, ನಾಗರಾಜ.ಸಿ, ಮಹಾದೇವಿ, ಮೇಘಾ, ಅರ್ಪಿತಾ ಅನ್ನೋ 6 ಜನರನ್ನು ಬಂಧಿಸಲಾಗಿದೆ.

ಲಿಂಗಸಗೂರು ತಾಲೂಕಿನ ಮುದಗಲ್ ನಲ್ಲಿ ಅಕ್ಕಿ ವ್ಯಾಪಾರಿಯೊಬ್ಬನಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು. ಯುಟ್ಯೂಬ್ ಚಾನೆಲ್ ಹೆಸರಿನಲ್ಲಿ ಅಂಗಡಿಗೆ ನುಗ್ಗಿದ್ದ ಆರೋಪಿಗಳು 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅಂಗಡಿಯವನಿಗೆ ಬೆದರಿಕೆಯೊಡ್ಡಿದ್ದರು. ಹಣ ಕೊಡದೆ ಇದ್ದರೆ ಸುದ್ದಿ ಪ್ರಸಾರ ಮಾಡುವುದಾಗಿ ಹೆದರಿಸಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

6 ಆರೋಪಿಗಳನ್ನು ಬಂಧಿಸಿರುವ ಮುದಗಲ್ ಠಾಣೆ ಪೊಲೀಸರು, ಸ್ವಿಪ್ಟ್ ಕಾರು, ಕ್ಯಾಮೆರಾ ಹಾಗೂ ಐಡಿ ಕಾರ್ಡ್ ವಶಕ್ಕೆ ಪಡೆದಿದ್ದಾರೆ.




error: Content is protected !!