ಅಶ್ಲೀಲ ವಿಡಿಯೋ ಪೋಸ್ಟ್: ಪೊಲೀಸರ ಕೈಗೆ ಸಿಕ್ಕ ಚಾಲಾಕಿ

344

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಸೋಷಿಯಲ್ ಮೀಡಿಯಾಗಳಲ್ಲಿ ಮಕ್ಕಳ ಅಶ್ಲೀಲ ವಿಡಯೋ ಪೋಸ್ಟ್ ಮಾಡ್ತಿದ್ದ ಚಾಲಾಕಿಯನ್ನ ಸಿಐಡಿ ಕ್ರೈಂ ವಿಭಾಗದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉಡುಪಿ ಮೂಲದ 21 ವರ್ಷದ ಸೌರವ ಶೆಟ್ಟಿ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.

ಎಂಬಿಎ ಪದಿವೀಧರನಾಗಿರುವ ಸೌರವ ಶೆಟ್ಟಿ ಬಳಿಯಿದ್ದ 7ಜಿಬಿ ಅಶ್ಲೀಲ ವಿಡಿಯೋಗಳನ್ನ ಜಪ್ತಿ ಮಾಡಲಾಗಿದೆ. ಬೆಂಗಳೂರಿನಲ್ಲಿ ವಾಸವಾಗಿರುವ ಈತ, ಇನ್ ಸ್ಟಾಗ್ರಾಮ್ ಮೂಲಕ ವಿಡಿಯೋ ಲಿಂಕ್ ಶೇರ್ ಮಾಡ್ತಿದ್ದ. ಆಸಕ್ತರಿಗೆ ಹೀಗೆ ಲಿಂಕ್ ಶೇರ್ ಮಾಡುವ ಮೂಲಕ ಹಣ ಗಳಿಸ್ತಿದ್ದ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋದ ಟೈಪ್ ಲೈನ್ ಮೂಲಕ, ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಹೆಣ್ಮಕ್ಕಳ ಅಶ್ಲೀಲ ವಿಡಿಯೋಗಳನ್ನ ಪೋಸ್ಟ್ ಮಾಡ್ತಿರುವು ಗೊತ್ತಾಗಿದೆ. ಸಿಐಡಿ ಪೊಲೀಸರ ಇದರ ತನಿಖೆ ನಡೆಸಿ ಸೌರವ ಶೆಟ್ಟಿಯನ್ನ ಬಂಧಿಸಿದ್ದು, ಈತನ ಜೊತೆಗೆ ಬೇರೆ ಬೇರೆ ರಾಜ್ಯಗಳ 10 ಮಂದಿ ದಂಧೆಕೋರರು ಇರುವುದು ತಿಳಿದು ಬಂದಿದೆ. ಇದರ ತನಿಖೆ ನಡೆಸಲಾಗ್ತಿದೆ.




error: Content is protected !!