ಭೂ‘ಸ್ವಾಹ’ ಅಧಿಕಾರಿ: ಅಕ್ರಮವಾಗಿ ಕೋಟಿ ಕೋಟಿ ಸಂಪಾದನೆ

322

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೆಎಎಸ್ ಹಾಗೂ ಐಎಎಸ್ ಅಧಿಕಾರಿಯಾಗುವ ಮೊದ್ಲು ನಾನು ಜನರ ಸೇವೆ ಮಾಡಬೇಕು. ಒಳ್ಳೆಯ ಆಡಳಿತ ನೀಡಬೇಕು. ಜನರಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌವಲತ್ತುಗಳನ್ನ ನೀಡುವಂತೆ ಮಾಡಬೇಕು ಎಂದು ಪ್ರತಿಯೊಬ್ಬರೂ ಹೇಳ್ತಾರೆ. ಆದ್ರೆ, ಅಧಿಕಾರ ಕೈಗೆ ಬಂದ್ಮೇಲೆ ನ್ಯಾಯ ಅನ್ನೋ ಪದದ ಜೊತೆಗೆ ಅ ಸೇರಿಸಿಕೊಂಡು ಅನ್ಯಾಯ ಮಾಡುತ್ತಲೇ ಹೋಗುತ್ತಾರೆ.

ಇಂದು ಮುಂಜಾನೆ ಕೆಎಎಸ್ ಅಧಿಕಾರಿ ಬಿ. ಸುಧಾ ಎಂಬುವರಿಗೆ ಸೇರಿದ ಮನೆ, ಕಚೇರಿ ಸೇರಿ ರಾಜ್ಯದ ಹಲವು ಕಡೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳಿಗೆ ಕೆದಕಿದಷ್ಟು ಆಸ್ತಿ, ಚಿನ್ನಾಭರಣ, ಹಣ, ದಾಖಲೆಗಳು ಸಿಗುತ್ತಲೇ ಇವೆ. ಈಕೆಯ ಮನೆ, ದುಬಾರಿ ಲೈಫ್ ಸ್ಟೈಲ್ ನೋಡಿದ್ರೆ ಬಿಡಿಎ ಇಲಾಖೆ ಭೂಸ್ವಾಧೀನ ಅಧಿಕಾರಿಯಾಗಿರುವ ಬದಲು ಭೂ ಸ್ವಾಹ ಅಧಿಕಾರಿಯಾಗಿದ್ಳು ಅನ್ನೋದು ಕಂಡು ಬರ್ತಿದೆ.

2007ರ ಕೆಎಎಸ್ ಅಧಿಕಾರಿಯಾದ ಉಡುಪಿ ಮೂಲದ ಸುಧಾ 13 ವರ್ಷಗಳಲ್ಲಿ ಕೋಟಿ ಕೋಟಿ ಹಣ ಸಂಪಾದನೆ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಉಡುಪಿ, ಸಾಗರ ಸೇರಿದಂತೆ ರಾಜ್ಯದ ನಾನಾ ಕಡೆ ಆಸ್ತಿ ಮಾಡಿದ್ದಾರೆ. ಗಂಡನ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಿಡಿಎ ಇಲಾಖೆಯನ್ನ ಖಜಾನೆ ಮಾಡಿದ್ಳು ಅನಿಸುತ್ತೆ. ಅಷ್ಟರ ಮಟ್ಟಿಗೆ ಆಸ್ತಿ ಮಾಡಿಕೊಂಡಿದ್ದಾರೆ ಈ ಮೇಡಂ.

ದಲ್ಲಾಳಿಗಳ ಜೊತೆ ಸೇರಿಕೊಂಡು ನೂರಾರು ಸೈಟ್ ಕಬಳಿಸಿರುವ ಆರೋಪವಿದೆ. ಕೆಂಪೇಗೌಡ ಬಡಾವಣೆಯಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆಸಿರುವ ಆರೋಪವಿದೆ. 2013ರಿಂದ 15ರ ತನಕ ಬಿಡಿಇ ಇಲಾಖೆಯಲ್ಲಿ ಠಿಕಾಣಿ ಹೂಡಿದ್ರು. ಭೂ ಸ್ವಾಧೀನ ಅಧಿಕಾರಿಯಾಗಿ, ಉಪ ಕಾರ್ಯದರ್ಶಿ 1 ಹಾಗೂ ಕೆಂಪೇಗೌಡ ಬಡಾವಣೆ ಉಸ್ತುವಾರಿ ಆಗಿಯೂ ಕೆಲಸ ಮಾಡಿರುವ ಸುಧಾ ಅವರು, ಸರ್ಕಾರ ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಮೂರು ನಾಮ ಹಾಕಿದ್ದಾರೆ. ಇಂಥವರಿಗೆ ಸರಿಯಾದ ಕಠಿಣ ಶಿಕ್ಷೆ ನೀಡಿ ಜೈಲು ಕಂಬಿ ಎಣಿಸುವಂತೆ ಮಾಡಬೇಕಿದೆ.




error: Content is protected !!