370 ಮತ್ತು 35ಎ ರದ್ದತಿಗೆ ಸಾರ್ವಜನಿಕರು ಏನಂತಾರೆ?

432

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕುರಿತು ಸಾರ್ವಜನಿಕರ ಅಭಿಪ್ರಾಯ ಇಲ್ಲಿದೆ.

ವಿಠಲ ಆರ್ ಯಂಕಂಚಿ, ಬಮ್ಮನಜೋಗಿ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 72 ವರ್ಷ ಗತಿಸಿದರೂ ಜಮ್ಮು-ಕಾಶ್ಮೀರದಲ್ಲಿ ಅಶಾಂತಿಯ ವಾತಾವರಣವಿತ್ತು. ಜಮ್ಮು ಮತ್ತು ಕಾಶ್ಮೀರ ಭಾರತದ ಸಿಂಧೂರ. ಆದರೆ, ಪ್ರತ್ಯೇಕತೆಗೆ ಹಲವಾರು ಕಾಣದ ಕೈಗಳು ಇಲ್ಲಿ ನಿರಂತರವಾಗಿ ಭಯದ ವಾತಾವರಣ ಸೃಷ್ಟಿಸಿದ್ದವು. 370 ಮತ್ತು 35ಎ ವಿಧಿ ರದ್ದು ಮಾಡಿರುವ ನರೇಂದ್ರ ಮೊದಿ, ಅಮೀತ್ ಶಾ ತಂಡಕ್ಕೆ ಧನ್ಯವಾದಗಳು. ಭಾರತದ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು.

ಜಗದೀಶ ಜು ಚಲವಾದಿ, ಇಂಗಳಗೇರಿ

ಇದೊಂದು ಅಚಾತುರ್ಯದ ನಿರ್ಧಾರವಾಗಿದೆ. ಸಾಯೊ ಪ್ರಜೆಯ ಕೊನೆ ಆಸೆಯನ್ನೂ ಕೇಳದೆ ತೆಗೆದುಕೊಂಡ ತಪ್ಪು ನಿರ್ಧಾರವಾಗಿದೆ. ಸಾರ್ವಜನಿಕರ ಅಭಿಪ್ರಾಯ ಕೇಳಬೇಕಿತ್ತು. ಜಮ್ಮು ಮತ್ತು ಕಾಶ್ಮೀರ ನಮ್ಮ ದೇಶದ ಶಿರ, ಸಿಂಧೂರ ತಿಲಕ ಎಂಬೆಲ್ಲ ಅಲಂಕಾರವ ಅಳಿಸಿದಂತಾಗಿದೆ. ಉಗ್ರರ ಮಟ್ಟಹಾಕು ಎಂದರೆ ಪ್ರಜೆಗಳ ಕಟ್ಟಿಹಾಕಿದಂತಾಗಿದೆ.

ಅಂಬರೀಶ ಎಸ್ ಸುಣಗಾರ, ಗಣಿಹಾರ

ಇತಿಹಾಸದ ತಪ್ಪನ್ನು ಈಗ ಸರಿಪಡಿಸಿದಕ್ಕೆ ಭಾರತೀಯರಿಗೆ ಇಂದು ಅತ್ಯಂತ ಸಂತಸದ ದಿನ. ಸಂವಿಧಾನದ ಆರ್ಟಿಕಲ್ 370 ಹಾಗು 35ಎ ವಿಧಿ ರದ್ದತಿ ಮೋದಿ ಸರ್ಕಾರದ ದಿಟ್ಟ ನಿರ್ಧಾರ. ಮೋದಿ ಸರ್ಕಾರಕ್ಕೆ ಅಭಿನಂದನೆಗಳು. ಭಾರತದ ಅವಿಭಾಜ್ಯ ಅಂಗವಾದ ಜಮ್ಮು ಕಾಶ್ಮೀರ ರಾಜ್ಯದ ಮೇಲೆ ಹೇರಿದ್ದ ಆರ್ಟಿಕಲ್ 370 ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ.




error: Content is protected !!