ವಿವಾದ ಸೃಷ್ಟಿಸುವ ರಾಜಕಾರಣಿಗಳೇ ಮುಳುಗುತ್ತಿದೆ ಬೆಂಗಳೂರು!

196

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿ ಜನ ಅಕ್ಷರಶಃ ನಲುಗಿದ್ದಾರೆ. ಬೃಹತ್ ಬೆಂಗಳೂರಿನ ಏರಿಯಾಗಳೆಲ್ಲ ನದಿಗಳಾಗಿ ಪರಿವರ್ತನೆಯಾಗಿವೆ. ಎಷ್ಟರ ಮಟ್ಟಿಗೆ ಇಲ್ಲಿ ದುರಾಡಳಿತ ವ್ಯವಸ್ಥೆ ಇರಬಹುದು ಎಂದು ಜನರು ಕಿಡಿ ಕಾರುತ್ತಿದ್ದಾರೆ.

ರಾಜಕಾಲುವೆ ಒತ್ತುವರಿ, ಕರೆಗಳ ಒತ್ತುವರಿ, ಅವೈಜ್ಞಾನಿಕ ಕಾಮಗಾರಿ, ಸರ್ಕಾರಿ ಜಾಗಗಳ ಒತ್ತುವರಿ ಪರಿಣಾಮ ಇಂದು ಇಡೀ ಬೆಂಗಳೂರಿಗರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಹದೇವಪುರ, ವರ್ತೂರು, ಸರ್ಜಾಪುರ, ಬೆಳ್ಳಂದೂರ ಔಟರ್ ರಿಂಗ್ ರೋಡ್, ಸೆಂಟ್ರಲ್ ಸಿಲ್ಕ್ ಬೋರ್ಡ್ ಸೇರಿದಂತೆ ಪ್ರಮುಖ ರಸ್ತೆಗಳು ಹೊಳೆಯಾಗಿ ಪರಿವರ್ತನೆಯಾಗಿವೆ. ಇನ್ನು ಸಣ್ಣಪುಟ್ಟ ಏರಿಯಾಗಳು, ಸ್ಲಂ ಬೋರ್ಡ್ ಗಳ ಕಥೆ ಕೇಳೋದೇ ಬೇಡ.

ಸಿಲಿಕಾನ್ ಸಿಟಿ, ಐಟಿ ಸಿಟಿ, ಗಾರ್ಡನ್ ಸಿಟಿ ಅಂತೆಲ್ಲ ಕರೆದುಕೊಳ್ಳುವ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬೆಂಗಳೂರು ಇಂದು ಮಳುಗಡೆಯ ಸ್ಥಿತಿ ಎದುರಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ದೃಶ್ಯಗಳನ್ನು ನೋಡಿದರೆ ಯಾವ ಪರಿಸ್ಥಿತಿ ಇದೆ ಅನ್ನೋದು ತಿಳಿಯುತ್ತೆ. ಬರೀ ಧರ್ಮ, ಜಾತಿ, ಕೋಮು ಸಂಘರ್ಷ, ವಿವಾದಾತ್ಮಕ ವಿಷಯಗಳಲ್ಲೇ ಮುಳುಗಿ ಹೋಗುವ ಜನಪ್ರತಿನಿಧಿಗಳು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈಗಿರುವ ಸಿಟ್ಟು ಚುನಾವಣೆ ಟೈಂನಲ್ಲಿ ಕರಗಿ ಹೋಗುತ್ತಿರುವುದಕ್ಕೆ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ.




error: Content is protected !!