ಮಹಿಳೆಯರಿಗೆ ಉಚಿತ ಪ್ರಯಾಣ, ಬಸ್ ಸಂಖ್ಯೆ ಕಡಿಮೆಯಾಗಿದ್ಯಾಕೆ?

158

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರದ 5 ಗ್ಯಾರೆಂಟಿಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ಬಂದಿದೆ. ಹೀಗಾಗಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಬಸ್ ಗಳ ಸಂಖ್ಯೆ ಕಡಿಮೆ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ.

ಹೌದು, ಮಹಿಳೆಯರಿಗೆ ಉಚಿತ ಬಸ್ ಎಂದು ಹೇಳಿರುವ ಸರ್ಕಾರ, ಮತ್ತೊಂದು ಕಡೆ ಬಸ್ ಸಂಖ್ಯೆಯನ್ನು ಕಡಿಮೆ ಮಾಡಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸರಿಯಾಗಿ ಸಾರಿಗೆ ವ್ಯವಸ್ಥೆ ಆಗುತ್ತಿಲ್ಲ. ಪ್ರತಿಯೊಂದು ಬಸ್ಸಿನಲ್ಲಿ ನಿಲ್ಲಲು ಜಾಗವಿಲ್ಲದಷ್ಟು ಜನರು ಹತ್ತಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಲಾಗುತ್ತಿದೆ.

ಇನ್ನೊಂದು ಕಡೆ ರಾಜ್ಯದ ಗಡಿಯ ತನಕ ಮಹಿಳೆಯರು ಉಚಿತವಾಗಿ ಸಂಚರಿಸಿ, ಅಲ್ಲಿಂದ ಟಿಕೆಟ್ ಪಡೆದು ಹೋಗಬೇಕು ಎಂದು ಹೇಳಿದ ಸರ್ಕಾರ, ಅಂತರ ರಾಜ್ಯ ಬಸ್ ಎಂದು ಹೇಳಿ, ರಾಜ್ಯದೊಳಗೆ ಸಂಚರಿಸಿದರೂ ಮಹಿಳೆಯರಿಗೆ ಉಚಿತ ಪ್ರಯಾಣ ಸಿಗುತ್ತಿಲ್ಲ. ಅವರಿಂದಲೂ ಹಣ ಪಡೆದು ಟಿಕೆಟ್ ನೀಡಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ನಿಧಾನವಾಗಿ ಯಡವುತ್ತಿದೆಯಾ ಅನ್ನೋ ಅನುಮಾನ ಜನರಲ್ಲಿ ಮೂಡಿದೆ.




error: Content is protected !!