ಬುಧವಾರ ರಾಯಲ್ ವರ್ಸಸ್ ರಾಯಲ್ಸ್ ಫೈಟ್

111

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಗುವಾಹಟಿ: ಐಪಿಎಲ್ 2024ನೇ ಸಾಲಿನ ಲೀಗ್ ನ ಕೊನೆಯ ಪಂದ್ಯ ಮಳೆಯಿಂದ ರದ್ದಾಗಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿ ತಲಾ ಒಂದೊಂದು ಪಾಯಿಂಟ್ ಪಡೆದಿವೆ.

ಕೆಕೆಆರ್. ರಾಜಸ್ಥಾನ್ ರಾಯಲ್ಸ್, ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಮೇ 21 ಮಂಗಳವಾರ ಕೊಲ್ಕತ್ತಾ ಹಾಗೂ ಹೈದ್ರಾಬಾದ್ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ.

ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಕದನ ನಡೆಯಲಿದೆ. ಹೀಗಾಗಿ ಸಾಕಷ್ಟು ಕುತೂಹಲ ಮೂಡಿಸಿದೆ. 18 ವರ್ಷಗಳಲ್ಲಿ ಒಮ್ಮೆಯೂ ಕಪ್ ಗೆಲ್ಲದ ಆರ್ ಸಿಬಿ ತಂಡಕ್ಕೆ ಈ ಬಾರಿ ದೊಡ್ಡ ಅವಕಾಶವಿದೆ. 9 ಬಾರಿ ಕ್ವಾಲಿಫೈ ಹಂತಕ್ಕೆ ಬಂದಿದೆ. 2009ರಲ್ಲಿ ಡೆಕ್ಕನ್ ಚಾರ್ಜಸ್ ಜೊತೆಗೆ ಫೈನಲ್ ನಲ್ಲಿ ಸೋತಿದೆ. 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋತಿದೆ. 2016ರಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಸೋತಿದೆ.

ಹೀಗೆ ಮೂರು ಬಾರಿ ಫೈನಲ್ ಗೆ ಬಂದು ನಿರಾಸೆ ಅನುಭವಿಸಿರುವ ಬೆಂಗಳೂರು ಹುಡುಗರಿಗೆ ಈ ಬಾರಿ ಮತ್ತೊಂದು ದೊಡ್ಡ ಅವಕಾಶವಿದೆ. ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಬೆಂಗಳೂರು ತಂಡ 2ನೇ ಟೂರ್ನಿಯಲ್ಲಿಯೇ ಕಪ್ ಗೆದ್ದಿದೆ. ಹೀಗಾಗಿ ಈ ವರ್ಷ ಹುಡುಗರ ತಂಡ ಕಪ್ ಗೆದ್ದರೆ ಒಂದೇ ವರ್ಷದಲ್ಲಿ ಎರಡೂ ತಂಡಗಳು ಕಪ್ ಗೆದ್ದ ರೆಕಾರ್ಡ್ ಜೊತೆಗೆ ಮೊದಲ ಬಾರಿಗೆ ಕಪ್ ಎತ್ತಿದ ಖುಷಿ ಸಹ ರಾಯಲ್ ಹುಡುಗರಿಗೆ ಇರಲಿದೆ.




error: Content is protected !!