ಕೊಲೆ ಪ್ರಕರಣ, ಡೇರಾ ಸಚ್ಚಾ ಸೌಧ ಮುಖ್ಯಸ್ಥ ಖುಲಾಸೆ

83

ಪ್ರಜಾಸ್ತ್ರ ಸುದ್ದಿ

ಚಂಡೀಗಢ: ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಖುಲಾಸೆಗೊಳಿಸಲಾಗಿದೆ. ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಮಂಗಳವಾರ ಖುಲಾಸೆಗೊಳಿಸಿದೆ.

ಜುಲೈ 10, 2002ರಲ್ಲಿ ಹರಿಯಾಣದ ಖಾನ್ ಪುರ್ ಕೊಲಿಯನ್ ಗ್ರಾಮದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಘಟನೆ ನಡೆದು 19 ವರ್ಷಗಳ ನಂತರ ಗುರ್ಮೀತ್ ಸಿಂಗ್ ಹಾಗೂ ಇತರೆ ನಾಲ್ವರಿಗೆ 2021ರಲ್ಲಿ ಸಿಬಿಐ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಇನ್ನು ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಗುರ್ಮೀತ್ ರಾಮ್ ರಹೀಮ್ ಸಿಂಗ್ ಜೈಲಿನಲ್ಲಿದ್ದಾರೆ. ತನ್ನ ವೇಷ ಭೂಷಣ, ಪಾಪ್ ಶೈಲಿಯ ಹಾಡು ಸೇರಿದಂತೆ ಸಾಕಷ್ಟು ವಿಭಿನ್ನ ಕಾರಣಕ್ಕೆ ಪಂಜಾಬ್, ಹರಿಯಾಣದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದು, ಈತ ಡೇರಾ ಸಚ್ಛಾ ಸೌಧದಲ್ಲಿ ನಡೆಸುತ್ತಿದ್ದ ಅಕ್ರಮದಾಟ ಮುಂದೆ ಬಯಲಾಯಿತು.




error: Content is protected !!