ಮತ ಎಣಿಕೆ, ಎನ್ ಡಿಎ ಆರಂಭಿಕ ಮುನ್ನಡೆ

71

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಲೋಕಸಭಾ ಚುನಾವಣೆ 2024ರ ಮತ ಎಣಿಕೆ ಕಾರ್ಯ ನಡೆದಿದೆ. ಈಗಾಗ್ಲೇ ಅಂಚೆ ಮತದಾನ ಪ್ರಕ್ರಿಯೆ ಮುಗಿದಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಪಡೆ ಮುನ್ನಡೆ ಕಾಯ್ದುಕೊಂಡಿದೆ.

ಕರ್ನಾಟಕದಲ್ಲಿ 28 ಕ್ಷೇತ್ರಗಳಿದ್ದು, ಇಲ್ಲಿಯೂ ಸಹ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ. ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಸೇರಿ ಅನೇಕ ಕಡೆ ಎನ್ ಡಿಎ ಟೀಂ ಮುನ್ನಡೆ ಸಾಧಿಸಿಕೊಂಡು ಬಂದಿದೆ.

542 ಕ್ಷೇತ್ರಗಳಲ್ಲಿ 8,360 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರೆಲ್ಲ ಮುಂದಿನ ರಾಜಕೀಯ ಭವಿಷ್ಯ ಇನ್ನು ಕೆಲವು ಗಂಟೆಗಳಲ್ಲಿ ನಿರ್ಧಾರವಾಗಲಿದೆ. ಅತ್ಯಾಚಾರದ ಆರೋಪ ಹೊತ್ತು, ಜೈಲು ಸೇರಿರುವ ಹಾಸನದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆರಂಭಿಕ ಹಿನ್ನಡೆ ಅನುಭವಿಸಿದ್ದಾರೆ.




error: Content is protected !!