ಜೂ.8ರಂದು ಮೋದಿ ಪ್ರಮಾಣ ವಚನ?

85

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಬಿಜೆಪಿ ನೇತೃತ್ವದಲ್ಲಿ ಎನ್ ಡಿಎ ಒಕ್ಕೂಟ ಇಂದು ಸಭೆ ನಡೆಸಿತು. 17ನೇ ಲೋಕಸಭೆಯನ್ನು ವಿಸರ್ಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಜೂನ್ 8ರಂದು ಮೂರನೇ ಬಾರಿಗೆ ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಎನ್ ಡಿಎ ಒಕ್ಕೂಟ ಸರಳ ಬಹುಮತ ಪಡೆದಿದೆ. ಟಿಡಿಪಿ ಹಾಗೂ ಜೆಡಿಯು ಬೆಂಬಲ ಸಹ ಎನ್ ಡಿಎ ಒಕ್ಕೂಟಕ್ಕೆ ಇದೆ ಎಂದು ತಿಳಿದು ಬಂದಿದೆ. ಹೀಗಾಗಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ಖಚಿತವಾಗಿದೆ.

ಎನ್ ಡಿಎ ಪಡೆ 293, ಇಂಡಿಯಾ ಕೂಟ 234 ಹಾಗೂ ಪಕ್ಷೇತರರು 16 ಕಡೆ ಗೆಲುವು ಸಾಧಿಸಿದ್ದಾರೆ. 240 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಸರ್ಕಾರ ರಚನೆಗೆ ಬೇಕಾಗಿರುವ ಮ್ಯಾಜಿಕ್ ನಂಬರ್ ಇಲ್ಲ. ಹೀಗಾಗಿ ಟಿಡಿಪಿ, ಜೆಡಿಯು ಬೆಂಬಲ ಪಡೆದು ಅಧಿಕಾರಕ್ಕೆ ಬರಲಿದೆ.




error: Content is protected !!