75 ರನ್ ಗೆ ನ್ಯೂಜಿಲೆಂಡ್ ಕಟ್ಟಿ ಹಾಕಿದ ಅಫ್ಗನ್

105

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟಿ-20 ವರ್ಲ್ಡ್ ಕಪ್ ನಲ್ಲಿ ಬಲಿಷ್ಟ ತಂಡಗಳು ಸಣ್ಣ ತಂಡಗಳ ಎದುರು ಮುಗ್ಗರಿಸುತ್ತಿವೆ. ಅಮೆರಿಕ ಎದುರು ಸೂಪರ್ ಓವರ್ ನಲ್ಲಿ ಪಾಕ್ ಸೋತ ಮುಖಭಂಗ ಅನುಭವಿಸಿತು. ಇದೇ ರೀತಿ ಶುಕ್ರವಾರ ಸಂಜೆ ನಡೆದ ಅಫ್ಗಾನಿಸ್ಥಾನ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಪಡೆ ಹೀನಾಯ ಸೋಲು ಕಂಡಿದೆ.

ರಶೀದ್ ಖಾನ್ ನಾಯಕತ್ವದ ಅಫ್ಗನ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದೆ. ವಿಕೆಟ್ ಕೀಪರ್ ಗುರ್ಬಝ್ ಭರ್ಜರಿ 80 ರನ್ ಬಾರಿಸಿದ. ಇಬ್ರಾಂ ಝಾರ್ದನ್ 44 ರನ್ ಗಳ ಆಟದಿಂದಾಗಿ 150ರ ಗಡಿ ದಾಟಿತು. ನ್ಯೂಜಿಲೆಂಡ್ ಪರ ಬೋಲ್ಟ್, ಹೆನ್ರಿ ತಲಾ 2 ವಿಕೆಟ್ ಪಡೆದರು. ಫರ್ಗುಸನ್ 1 ವಿಕೆಟ್ ಪಡೆದರು.

ಈ ಸ್ಕೋರ್ ಬೆನ್ನು ಹತ್ತಿದ ಕೇನ್ ವಿಲಿಯಮ್ಸನ್ ಬಳಗ ಕೇವಲ 75 ರನ್ ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಅನುಭವಿಸಿತು. ಅಫ್ಗನ್ ಬೌಲರ್ ಗಳು ಕಿವೀಸ್ ಪಡೆಯನ್ನು ಎರಡಂಕಿ ದಾಟಲು ಬಿಡದೆ ಪೆವಿಲಿಯನ್ ಗೆ ಕಳಿಸಿದರು. ಗ್ಲೇನ್ ಫಿಲ್ಪಸ್ 18,  ಮ್ಯಾಟ್ ಹೆನ್ರಿ 12 ರನ್ ಬಿಟ್ಟರೆ ದೈತ್ಯ ಬ್ಯಾಟ್ಸಮನ್ ಗಳು ಮುಗ್ಗರಿಸಿದರು. ಅಫ್ಗನ್ ಪರ ನಾಯಕ ರಶೀದ್ ಖಾನ್ ಹಾಗೂ ಫಾಜಿಲ್ ಫಾರೂಕಿ ತಲಾ 4 ವಿಕೆಟ್ ಪಡೆದು ಮಿಂಚಿದರು. ನಬಿ 2 ವಿಕೆಟ್ ಪಡೆದು ಸಾಥ್ ನೀಡಿದರು. ಗುರ್ಬಝ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.




error: Content is protected !!