ಅಮೆರಿಕ ವಿರುದ್ಧ ಗೆದ್ದ ವಿಂಡೀಸ್ ಸೆಮಿ ಆಸೆ ಜೀವಂತ

82

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಟಿ-20 ವರ್ಲ್ಡ್ ಕಪ್ ಟೂರ್ನಿಯ ಸೂಪರ್ 8 ಪಂದ್ಯಗಳಲ್ಲಿ ಇಂದು ನಡೆದ ಅಮೆರಿಕ ಹಾಗೂ ವೆಸ್ಟ್ ವಿಂಡೀಸ್ ನಡುವಿನ ಹೋರಾಟದಲ್ಲಿ ಕೆರಿಬಿಯನ್ಸ್ ಪಡೆ 9 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ನಾಯಕನ ಲೆಕ್ಕಾಚಾರವನ್ನು ಬೌಲರ್ ಗಳು ನಿಜ ಮಾಡಿದರು. ಹೀಗಾಗಿ 19.5 ಓವರ್ ಗಳಲ್ಲಿ 128 ರನ್ ಗಳಿಗೆ ಆಲೌಟ್ ಆಯಿತು. ಆಂಡ್ರೊ ರಸಲ್, ರೋಸ್ಟನ್ ಚಸೆ ತಲಾ 3 ವಿಕೆಟ್ ಗಳು ಕಿತ್ತಿದರು. ಜೋಸಪ್ 2, ಮೊಟಿ 1 ವಿಕೆಟ್ ಪಡೆದರು.

ಈ ಅಲ್ಪ ಗುರಿ ಬೆನ್ನು ಹತ್ತಿದ ವೆಸ್ಟ್ ವಿಂಡೀಸ್ ಪಡೆ ಕೇವಲ 10.5 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಹೋಪ್ ಭರ್ಜರಿ ಅಜೇಯ 89 ರನ್(8 ಸಿಕ್ಸ್, 4 ಫೋರ್), ಪೋರಾನ್ ಅಜೇಯ್ 27 ರನ್(3 ಸಿಕ್ಸ್, 1 ಫೋರ್) ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಸೆಮಿ ಫೈನಲ್ ಆಸೆ ಜೀವಂತವಾಗಿದೆ.




error: Content is protected !!