ಇಕ್ಬಾಲ್ ಜೊತೆಗೆ ಸೋನಾಕ್ಷಿ ಸಿನ್ಹಾ ಮದುವೆ

69

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಹಿರಿಯ ನಟ, ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಅವರ ಮಗಳು, ನಟಿ ಸೋನಾಕ್ಷಿ ಸಿನ್ಹಾ ಹಾಗೂ ಇಕ್ಬಾಲ್ ಮದುವೆ ಜೂನ್ 23ರಂದು ನಡೆಯುತ್ತಿದೆ. ಇದರಲ್ಲಿ ನಾವೆಲ್ಲ ಭಾಗಿಯಾಗುತ್ತಿದ್ದೇವೆ ಎಂದು ತಂದೆ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

ಆರಂಭದಲ್ಲಿ ಈ ಮದುವೆ ಸೋನಾಕ್ಷಿ ಕುಟುಂಬದಿಂದ ವಿರೋಧವಿದೆ. ಮದುವೆಗೆ ಅವರು ಒಪ್ಪಿಲ್ಲ. ಹಿಂದುತ್ವದ ವಿಚಾರಗಳನ್ನು ಹೊಂದಿರುವ, ಅವರ ಮನೆಗೂ ಸಹ ರಾಮಾಯಣ ಎಂದು ಹೆಸರು ಇಟ್ಟಿರುವ ಶುತ್ರಘ್ನ ಸಿನ್ಹಾ, ಮುಸ್ಲಿಂ ಯುವಕನೊಂದಿಗೆ ಮಗಳ ಮದುವೆಗೆ ಒಪ್ಪಿಕೊಂಡಿಲ್ಲ. ಮಗಳು ತಮ್ಮ ಮಾತು ಕೇಳುತ್ತಿಲ್ಲವೆಂದು ಆಪ್ತರ ಮುಂದೆ ಹೇಳಿಕೊಂಡಿದ್ದಾರೆ ಅನ್ನೋ ವಿಚಾರ ಹರಿದಾಡಿತ್ತು.

ಈ ಬಗ್ಗೆ ಮಾತನಾಡಿರುವ ಶತ್ರುಘ್ನ ಸಿನ್ಹಾ, ಕೆಲ ಮಾಧ್ಯಮಗಳು ಊಹೆ ಮಾಡಿಕೊಂಡು ಹೇಳಿವೆ. ಇದೆಲ್ಲ ಸಹಜ. ಎಲ್ಲವೂ ಬಗೆ ಹರಿದಿದೆ ಎಂದಿದ್ದಾರೆ. 2022ರಲ್ಲಿ ಬಿಡುಗಡೆಯಾದ ಡಬಲ್ ಎಕ್ಸ್ ಎಲ್ ಚಿತ್ರದಲ್ಲಿ ಜಹೀರ್ ಇಕ್ಬಾಲ್ ಹಾಗೂ ಸೋನಾಕ್ಷಿ ಸಿನ್ಹಾ ಒಟ್ಟಿಗೆ ನಟಿಸಿದ್ದಾರೆ. ಅಂದಿನಿಂದ ಇವರಿಬ್ಬರ ನಡುವೆ ಡೇಟಿಂಗ್ ನಡೆದಿದೆ ಎಂದು ಹೇಳಲಾಗುತ್ತಿತ್ತು.




error: Content is protected !!