ರೋಹಿತ್ ಅಬ್ಬರ.. ಸೆಮಿಗೆ ಭಾರತ

82

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಟಿ-20 ವರ್ಲ್ಡ್ ಕಪ್ ಟೂರ್ನಿಯ ಸೂಪರ್ 8 ಪಂದ್ಯಗಳಲ್ಲಿ ಸೋಮವಾರ ಸಂಜೆ ನಡೆದ ಪಂದ್ಯದಲ್ಲಿ ಆಸೀಸ್ ವಿರುದ್ಧ ಭಾರತ 24 ರನ್ ಗಳ ಜಯ ಸಾಧಿಸುವ ಮೂಲಕ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಆಸೀಸ್ ಇಂದು ನಡೆಯುವ ಬಾಂಗ್ಲಾ ಹಾಗೂ ಅಫ್ಗನ್ ಪಂದ್ಯದಲ್ಲಿ ಬಾಂಗ್ಲಾ ಗೆಲ್ಲಲಿ ಎನ್ನುವ ಹಂತಕ್ಕೆ ಬಂದಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಮಿಚಲ್ ಮಾರ್ಸ್ ಪ್ಲಾನ್ ಸಂಪೂರ್ಣ ಉಲ್ಟಾ ಮಾಡಿದ್ದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ. ಮೊದಲು ಬ್ಯಾಟ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸುವ ಮೂಲಕ ಈ ಟೂರ್ನಿಯಲ್ಲಿ 200 ರನ್ ದಾಟಿದ ಮೊದಲ ತಂಡವಾಯ್ತು.

ರೋಹಿತ್ ಶರ್ಮಾ ಅಬ್ಬರಿಸಿ 8 ಸಿಕ್ಸ್, 7 ಫೋರ್ ಬಾರಿಸಿ 41 ಬೌಲ್ ಗಳಲ್ಲಿ 92 ರನ್ ಗಳಿಸಿದರು. ಕೊಹ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು. ಪಂತ್ 15, ಸೂರ್ಯಕುಮಾರ್ 31, ಶುವಂ ದುಬೆ 28, ಪಾಂಡ್ಯ ಅಜೇಯ 27, ಜಡೇಜಾ ಅಜೇಯ 9 ರನ್ ಗಳಿಸಿದರು. ಆಸೀಸ್ ಪರ ಸ್ಟಾರ್ಕ್, ಸ್ಟೊನಿಯ್ಸ್ ತಲಾ 2 ವಿಕೆಟ್ ಪಡೆದರು. ಹಜೆಲ್ ವುಡ್ 1 ವಿಕೆಟ್ ಪಡೆದರು.

ಸವಾಲಿನ ಗುರಿ ಬೆನ್ನು ಹತ್ತಿದ ಕಾಂಗೂರು ಪಡೆ ಮೊದಲ ಓವರ್ ನಲ್ಲಿ ಡೇವಿಡ್ ವಾರ್ನರ್ ಕಳೆದುಕೊಂಡಿತು. ಮುಂದೆ ಹೆಡ್ ಹಾಗೂ ನಾಯಕ ಮಾರ್ಸ್ ಗಟ್ಟಿಯಾಗಿ ನಿಂತರು. 9 ಓವರ್ ನಲ್ಲಿ ಕುಲ್ದೀಪ್ ಬೌಲಿಂಗ್ ನಲ್ಲಿ ಮಾರ್ಸ್ ಬೌಂಡರಿಗೆ ಅಟ್ಟಿದ್ದ ಬೌಲ್ ನ್ನು ಅಕ್ಷರ್ ಪಟೇಲ್ ಅದ್ಬುತ್ ಕ್ಯಾಚ್ ಪಡೆಯುವ ಮೂಲಕ ಮ್ಯಾಚ್ ಟರ್ನ್ ಮಾಡಿದರು. ಆಗ 87ಕ್ಕೆ 2 ವಿಕೆಟ್ ಆಯಿತು.

ನಂತರ ಬಂದ ಮ್ಯಾಕ್ಸ್ ವೆಲ್ ಆರಂಭದಲ್ಲೇ ಅಬ್ಬರಿಸಲು ಶುರು ಮಾಡಿದರು. 37 ರನ್ ಗಳಿಸಿದ ಮ್ಯಾಕ್ಸಿ ಕುಲ್ದೀಪ್ ಗೆ ವಿಕೆಟ್ ಒಪ್ಪಿಸಿ ನಡೆದರು. ಇನ್ನೊಂದು ಬದಿಯಲ್ಲಿ ನಿಂತು ಸಿಕ್ಸ್, ಫೋರ್ ಬಾರಿಸುತ್ತಿದ್ದ ಟ್ರಾವಿಸ್ ಹೆಡ್ ಭಾರತದ ಕೈಯಿಂದ ಪಂದ್ಯ ಕಸಿದುಕೊಳ್ಳಲು ನಿಂತಿದ್ದರು. 17ನೇ ಓವರ್ ನಲ್ಲಿ ಬೂಮ್ರಾ ಬೌಲಿಂಗ್ ನಲ್ಲಿ ಹೆಡ್ ರೋಹಿತ್ ಗೆ ಕ್ಯಾಚ್ ಕೊಟ್ಟು ಹೊರ ನಡೆದರು.  43 ಬೌಲ್ ಗಳಲ್ಲಿ 73 ರನ್ ಗಳಿಸಿದ್ದರು. ಮುಂದೆ ಬಂದವರು ಹೆಚ್ಚು ಹೊತ್ತು ನಿಲ್ಲಿಲ್ಲ. ಹೀಗಾಗಿ 20 ಓವರ್ ಗಳಲ್ಲಿ 7ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ 24 ರನ್ ಗಳಿಂದ ಸೋತಿತು. ಭಾರತ ಸತತ ಗೆಲುವಿನ ಮೂಲಕ ಸೆಮಿಗೆ ಎಂಟ್ರಿ ಕೊಟ್ಟಿತು.




error: Content is protected !!